ಮತ್ತೊಂದು ಮಹತ್ವದ ಆದೇಶ ಹೊರಡಿಸಿದ ಯೋಗಿ ಆದಿತ್ಯನಾಥ್

ಕೋರನ ಸಾಂಕ್ರಾಮಿಕ ರೋಗವನ್ನು ತಡೆಗಟ್ಟಲು ಸದಾ ಒಂದಲ್ಲ ಒಂದು ಆದೇಶ ಹೊರಡಿಸಿ ಸುದ್ದಿಯಲ್ಲಿರುವ ಉತ್ತರಪ್ರದೇಶದ ಯೋಗಿ ಆದಿತ್ಯನಾಥ್ ಅವರು ಈ ಬಾರಿ ಪ್ರಮುಖ ಆದೇಶವೊಂದನ್ನು ಪ್ರಕಟಿಸಿದ್ದಾರೆ .ಜೂನ್ 30 ರವರೆಗೆ ಉತ್ತರ ಪ್ರದೇಶದಲ್ಲಿ ಸಾರ್ವಜನಿಕರು ಗುಂಪುಗೂಡುವುದನ್ನು ನಿಷೇಧಿಸಲಾಗಿದ್ದು ಈ ಆದೇಶವನ್ನು ಧಿಕ್ಕರಿಸುವ ವಿರುದ್ಧ ಕಾನೂನು ಕ್ರಮ ಜರುಗಿಸುವ ಎಚ್ಚರಿಕೆಯನ್ನು ಯೋಗಿ ಆದಿತ್ಯನಾಥ್ ನೀಡಿದ್ದಾರೆ .ಶುಕ್ರವಾರ ಸಚಿವ ಸಂಪುಟದ ಸಭೆ ನಡೆಸಿದ ಯೋಗಿ ಆದಿತ್ಯನಾಥ ಅವರು ಈ ಆದೇಶವನ್ನು ಹೊರಡಿಸಿದ್ದು , ಉತ್ತರಪ್ರದೇಶದಲ್ಲಿ ಮೇ ೩ ರ ವರೆಗೆ ಲಾಕ್ ಡೌನ್ ವಿಸ್ತರಿಸಲಾಗಿದ್ದು ,ಪರಿಸ್ಥಿತಿಯನ್ನು ನೋಡಿ ಈ ಲಾಕ್ ಡೌನ್ ಅನ್ನು ಸಡಿಲ ಮಾಡಲಾಗುವುದು ಎಂದು ಆದಿತ್ಯನಾಥ್ ತಿಳಿಸಿದ್ದಾರೆ.

Comments