ಕುಸಿದ ಅಮೇರಿಕಾ ಆರ್ಥಿಕತೆ : ಪುನರುಜ್ಜೀವನ ನೀಡಲು ಭಾರತೀಯ ಅಮೆರಿಕನ್ನರ ಮೊರೆ ಹೋದ ಟ್ರಂಪ್

ಚೀನಾ ದಿಂದ ಆರಂಭಗೊಂಡ  ಕೊರೋನಾ ವೈರಸ್ ಜಗತ್ತಿನ ಹಲವು ದೇಶಗಳಿಗೆ ವ್ಯಾಪಿಸಿದೆ  ಮತ್ತು ಇದು ಜಾಗತಿಕ ಮಟ್ಟದಲ್ಲಿ ಆರ್ಥಿಕತೆ  ಮೇಲೆ ಕೂಡ ಪರಿಣಾಮ ಬೀರಿದೆ.ಅಮೇರಿಕಾದ ಆರ್ಥಿಕತೆ ಕೂಡ   ತಲ್ಲಣಗೊಂಡಿದೆ. ಇನ್ನು ಅಮೆರಿಕಾದ ಆರ್ಥಿಕತೆ ಪುನರುಜ್ಜೀವನಕ್ಕಾಗಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಲಹೆ ಪಡೆಯಲು ತಂಡವೊಂದನ್ನು ರಚಿಸಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ತಂಡದಲ್ಲಿ, ಗೂಗಲ್ ನ ಸುಂದರ್ ಪಿಚ್ಚೈ, ಮೈಕ್ರೋಸಾಫ್ಟ್ ನ ಸತ್ಯ ನಾದೆಳ್ಲ ಸೇರಿದಂತೆ ಕಾರ್ಪೊರೇಟ್ ವಲಯದಲ್ಲಿ ಮುಂಚೂಣಿಯಲ್ಲಿರುವ 6 ಭಾರತೀಯ-ಅಮೆರಿಕನ್ನರನ್ನು ನೇಮಕ ಮಾಡಿ, ಕೊರೋನಾದಿಂದ ನೆಲಕಚ್ಚಿರುವ ಆರ್ಥಿಕತೆಯನ್ನು ಸುಧಾರಿಸುವಂತೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸಲಹೆ ನೀಡುವಂತೆ ಸೂಚಿಸಿದ್ದಾರೆ.

ಕೊರೋನಾ ವೈರಸ್ ನ ಪರಿಣಾಮ ಅಮೆರಿಕಾದಲ್ಲಿ ಈಗ ಸೃಷ್ಟಿಯಾಗಿರುವ ಬಿಕ್ಕಟ್ಟಿನಿಂದಾಗಿ 16 ಮಿಲಿಯನ್ ಜನರ ಉದ್ಯೋಗಕ್ಕೆ ಕುತ್ತು ಬಂದಿದೆ. ಈ ಹಿನ್ನೆಲೆಯಲ್ಲಿ ಅಮೆರಿಕದ ವಿವಿಧ ಕ್ಷೇತ್ರಗಳ 200 ನಾಯಕರನ್ನು ಯುಎಸ್ ಆರ್ಥಿಕತೆ ಪುನರುಜ್ಜೀವನ ತಂಡಕ್ಕೆ ನೇಮಕ ಮಾಡಿದ್ದು, ವಿವಿಧ ವಿಷಯಗಳತ್ತ ಈ ತಂಡ ಗಮನ ಹರಿಸಿ ಅಧ್ಯಕ್ಷರಿಗೆ ವರದಿ ನೀಡಲಿದೆ.


Comments