ಸ್ವ ಇಚ್ಛೆಯಿಂದ ಇಸ್ಲಾಂ ತೊರೆದು ಹಿಂದೂ ಧರ್ಮವನ್ನು ಸ್ವೀಕರಿಸಿದ 40 ಕುಟುಂಬದ 250 ಮಂದಿ

ಹರಿಯಾಣ :ಲಾಕ್ ಡೌನ್ ನಡುವೆ 40 ಮುಸ್ಲಿಂ ಕುಟುಂಬದ 250 ಮಂದಿ ಘರ್ ವಾಪಸಿಯಾಗಿದ್ದಾರೆ.ಸ್ವ ಇಚ್ಛೆಯಿಂದ ಇಸ್ಲಾಂ ತೊರೆದು ಹಿಂದೂ ಧರ್ಮವನ್ನು ಸ್ವೀಕರಿಸಿದ್ದಾರೆ. ನಂತರ ಸಾವನಪ್ಪಿದ ಮಹಿಳೆಯ ಮೃತದೇಹವನ್ನು ಹಿಂದೂ ಧರ್ಮದ ಪ್ರಕಾರವೇ ಅಂತಿಮ ಸಂಸ್ಕಾರ ಮಾಡಿದ್ದಾರೆ.

ಸ್ವ ಇಚ್ಛೆಯಿಂದ ಹಿಂದೂ ಧರ್ಮ ಸ್ವೀಕಾರ!
ಮೃತ ಮಹಿಳೆ ಪೂಲಿ ದೇವಿ ಇಸ್ಲಾಂ ಧರ್ಮವನ್ನು ಪ್ರತಿಪಾದಿಸುತ್ತಿದ್ದರು. ಹೀಗಾಗಿ ನಾವೆಲ್ಲಾ ಇಸ್ಲಾಂ ಅನ್ನು ಪಾಲಿಸುತ್ತಿದ್ದೇವು. ಈಕೆ ಸತ್ತ ನಂತರ ಈಕೆಯ ಮಗ ಸೇರಿದಂತೆ 40 ಕುಟುಂಬಗಳು ಹಿಂದೂ ಧರ್ಮವನ್ನು ಸ್ವೀಕರಿಸಿದೆ. ಪೂಲಿ ದೇವಿ ಪುತ್ರ ಸತ್ಬೀರ್ ನಾವು ಸ್ವಇಚ್ಛೆಯಿಂದ ಮತಾಂತರಗೊಂಡಿರುವುದಾಗಿ ಹೇಳಿದ್ದಾರೆ. ನಾವು ಹಿಂದೂ ಧರ್ಮಕ್ಕೆ ಒಳಪಡುವ ದೂಮ್ ಜಾತಿಯವರಾಗಿದ್ದು ನಮ್ಮ ಹಿರಿಯರು ಹಿಂದೂಗಳಾಗಿದ್ದರು. ಆದರೆ ಮೊಘಲ್ ದೊರೆ ಔರಂಗಜೇಬನ ಸಮಯದಲ್ಲಿ ನಮ್ಮ ಪೂರ್ವಜರನ್ನು ಮತಾಂತರ ಮಾಡಲಾಯಿತು ಎಂದು ಸತ್ಬೀರ್ ತಿಳಿಸಿದ್ದಾನೆ.

ಇನ್ನು ಮತಾಂತರಗೊಂಡ ಮತ್ತೊಬ್ಬ ಯುವಕ ಮಜೀದ್‌ ಎಂಬಾತ, ನಮ್ಮ ಮಕ್ಕಳ ಭವಿಷ್ಯವನ್ನ ಮನದಲ್ಲಿಟ್ಟುಕೊಂಡು ಮತಾಂತರವಾಗುತ್ತಿದ್ದೇವೆ. ಮೊದಲು ನಮ್ಮ ಸಮುದಾಯದವರಿಗೆ ಶಿಕ್ಷಣವಿರಲಿಲ್ಲ ಹೀಗಾಗಿ ನಮಗೆ ಏನು ಗೊತ್ತಿರಲಿಲ್ಲ. ಈಗ ನಮ್ಮವರಿಗೆ ಶಿಕ್ಷಣ ಸಿಕ್ಕಿರೋದ್ರಿಂದ ಎಲ್ಲಾ ತಿಳಿಯುತ್ತಿದೆ ಎಂದು ಹೇಳಿದ್ದಾನೆ.

Comments