ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಜಿನ್ನಾ ಮಾನಸಿಕತೆಯಿಂದ ಹೊರಬಂದಿಲ್ಲ ಎಂದು ಸಚಿವ ಸಿಟಿ ರವಿ ಕಿಡಿಕಾರಿದ್ದಾರೆ.ವಕ್ಫ್ ಬೋರ್ಡ್ ಹಣವನ್ನು ರಾಜ್ಯ ಸರ್ಕಾರ ತೆಗೆದುಕೊಳ್ಳಬಾರದು ಎಂಬ ಕಾಂಗ್ರೆಸ್ ಶಾಸಕ ಜಮೀರ್ ಹೇಳಿಕೆಯ ಬಗ್ಗೆ ಪ್ರತಿಕ್ರಿಯಿಸಿದ ಸಿ ಟಿ ರವಿ ಅವರು, ಇದು ಸಂವಿಧಾನ ವಿರೋಧಿ ಹೇಳಿಕೆಯಾಗಿದೆ. ಯಾವುದೇ ಜಾತಿ ಅಥವಾ ಧರ್ಮದ ವಿಚಾರಕ್ಕೆಸಂಬಂಧಿಸಿದಂತೆ ತಾರತಮ್ಯ ಮಾಡಲು ಸಂವಿಧಾನದಲ್ಲಿ ಅವಕಾಶವಿಲ್ಲ. ಇದು ಜಾತ್ಯತೀತ ನೀತಿಗೆ ವಿರುದ್ಧವಾದದ್ದು. ಕೊರೋನಾ ಸಾಂಕ್ರಾಮಿಕ ಪಿಡುಗಿನ ಈ ಸಂದರ್ಭದಲ್ಲಿ ಜಮೀರ್ ಅಹ್ಮದ್ ಖಾನ್ ಮಾನವೀಯತೆಗೆ ವಿರುದ್ಧವಾಗಿ ಜಾತಿಯನ್ನು ಪ್ರತಿಬಿಂಬಿಸುವ ಹೇಳಿಕೆ ಕೊಟ್ಟಿದ್ದಾರೆ. ಇದು ಜಮೀರ್ ಹೇಳಿಕೆಯೋ, ಕಾಂಗ್ರೆಸ್ ಪಕ್ಷದ ಹೇಳಿಕೆಯೋ ಎಂದು ಸಿಟಿ ರವಿ ಪ್ರಶ್ನಿಸಿದರು.
ಅಂತೆಯೇ ಕಾಂಗ್ರೆಸ್ ನವರು ಯಾರೂ ಇದರ ಬಗ್ಗೆ ಪ್ರತಿಕ್ರಿಯೆ ಕೊಡುತ್ತಿಲ್ಲ. ಮತಾಂಧತೆಯ ಉನ್ಮತ್ತತೆಯಲ್ಲಿ ಜಮೀರ್ ಬಡ ಬಡಾಯಿಸುತ್ತಿದ್ದಾರೆ. ವಕ್ಫ್ ಬೋರ್ಡ್ ಸರ್ಕಾರಕ್ಕಿಂತ ದೊಡ್ಡದಲ್ಲ. ವಕ್ಫ್ ಬೋರ್ಡ್ ಗೆ ಕೊಡುವುದು ಸಾರ್ವಜನಿಕರ ಹಣ. ಅವರು ಜಿನ್ನಾ ಮಾನಸಿಕತೆಯಿಂದ ಇನ್ನೂ ಹೊರ ಬಂದಿಲ್ಲ. ಜಕಾತ್ ಕೊಟ್ಟು ಡೆಪಾಸಿಟ್ ಮಾಡಿರುವ ಹಣ ಅಲ್ಲ. ಜಮೀರ್ ಅಹ್ಮದ್ ಅವರು ಕೊಡುವ ಜಕಾತ್ ಹಣವನ್ನು ನಾವು ಕೇಳುವುದಿಲ್ಲ. ವಕ್ಫ್ ಹಣವನ್ನು ಹೇಗೆ ಖರ್ಚು ಮಾಡಬೇಕು ಎಂದು ಹೇಳುವ ಅಧಿಕಾರ ಜಮೀರ್ ಗೆ ಇಲ್ಲ. ಅವರ ಜಾತ್ಯತೀತತೆಯ ಮಾತು ಕೇವಲ ನಾಟಕ ಎಂದು ಈ ಮೂಲಕ ಸಾಬೀತಾಗಿದ ಎಂದು ಸಿಟಿ ರವಿ ಕಿಡಿಕಾರಿದ್ದಾರೆ.

Comments
Post a Comment