ಹಿಜ್ಬುಲ್ ಮುಜಾಹಿದ್ದೀನ್ ಕಮಾಂಡರ್ ರಿಯಾಜ್ ನಾಯ್ಕು ಅನ್ನು ಸುತ್ತುವರಿದು ಗುಂಡಿಕ್ಕಿದ ಸೇನಾ ಪಡೆಗಳು

ಜಮ್ಮು ಕಾಶ್ಮೀರ :ಮಂಗಳವಾರ ತಡರಾತ್ರಿ ಭದ್ರತಾ ಪಡೆಗಳು ನಡೆಸಿದ ಬೃಹತ್ ಶೋಧ ಕಾರ್ಯಾಚರಣೆಯಲ್ಲಿ ಕಾಶ್ಮೀರದ ಮೋಸ್ಟ್ ವಾಂಟೆಡ್ ಭಯೋತ್ಪಾದಕ ಮತ್ತು ಹಿಜ್ಬುಲ್ ಮುಜಾಹಿದ್ದೀನ್ ಕಮಾಂಡರ್ ರಿಯಾಜ್ ನಾಯ್ಕೂ ನನ್ನು ಹೋಡೆದುರುಳಿಸಿದ್ದಾರೆ. ದಕ್ಷಿಣ ಕಾಶ್ಮೀರದ ಅವಂತಿಪೋರಾದ ಬೀಗ್‌ಪೊರಾ ಪ್ರದೇಶದ  ಹಳ್ಳಿಯಲ್ಲಿ ಈ ಎನ್‌ಕೌಂಟರ್‌ ನಡೆದಿದೆ.

ಜಮ್ಮು ಕಾಶ್ಮೀರ ಪೊಲೀಸರ  ತಂಡ, ಭಾರತೀಯ ಸೈನ್ಯದ 55 ರಾಷ್ಟ್ರೀಯ ರೈಫಲ್ಸ್ ಮತ್ತು ಸಿಆರ್‌ಪಿಎಫ್  ನಡೆಸಿದ ಜಂಟಿ ಕಾರ್ಯಚರಣೆ ಇದಾಗಿದೆ . ಈ ಪ್ರದೇಶದಲ್ಲಿ ಉಗ್ರರು ಅಡಗಿರುವ  ಖಚಿತ ಮಾಹಿತಿ ಆದಾರದ  ನಂತರ ಬೀಗ್‌ಪೊರಾದಲ್ಲಿ ಶೋಧ ಕಾರ್ಯಾಚರಣೆಯನ್ನು ಭದ್ರತಾ ಪಡೆಗಳು ಆರಂಭಿಸಿದ್ದವು .

ಸೇನಾ ಪಡೆಗಳ ಕಾರ್ಯಾಚರಣೆಯಲ್ಲಿ ಹತ್ಯೆಗೀಡಾದ ಹಿಜ್ಬುಲ್ ಕಮಾಂಡರ್ ಕಣಿವೆಯಲ್ಲಿ ಸಕ್ರಿಯವಾಗಿ ಭಯೋತ್ಪಾದನಾ ಚಟುವಟಿಕೆಯಲ್ಲಿ  ತೊಡಗಿಸಿಕೊಂಡು ಅಪಹರಣ ಸೇರಿ ಬಾಂಬ್ ಸ್ಫೋಟಗಳಲ್ಲಿ ಈತ ಪಾಲುದಾರನಾಗಿದ್ದ ,ಕಣಿವೆಯಲ್ಲಿ ಉಗ್ರರ ಆಯ್ಕೆ ಮತ್ತು ತರಬೇತಿಯ ಹೊಣೆ ಹೊತ್ತಿದ್ದ ರಿಯಾಜ್ ನಾಯ್ಕೂ ತಲೆಗೆ ಸರ್ಕಾರ ಹನ್ನೆರಡು ಲಕ್ಷ ಘೋಷಣೆ ಮಾಡಿತ್ತು .ಸದ್ಯ ಪ್ರದೇಶದಲ್ಲಿ ಸೇನಾ ಕಾರ್ಯಾಚರಣೆ ಮುಂದುವರಿದಿದ್ದು ಪ್ರದೇಶದಲ್ಲಿ ಮುಂಜಾಗ್ರತಾ ಕ್ರಮವಾಗಿ ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ .

ಕಳೆದ ಕೆಲವು ವಾರಗಳಿಂದ ಹಂದವಾರ ಸೇರಿ ಪ್ರದೇಶದಲ್ಲಿ ಸೇನಾ ಪಡೆಗಳು ಉಗ್ರರ ವಿರುದ್ಧ ನಡೆಸಿದ ಕಾರ್ಯಾಚರಣೆಯಲ್ಲಿ ಎಂಟು ಯೋಧರು ಹುತಾತ್ಮರಾಗಿದ್ದಾರೆ .






Comments