ಲಷ್ಕರ್ ಉಗ್ರರ ಅಡಗುತಾಣವನ್ನು ಪತ್ತೆ ಹಚ್ಚಿದ ಸೇನೆ

ಜಮ್ಮು ಕಾಶ್ಮೀರದ ಬಡ್ಗಾಮ್ ಪ್ರದೇಶದಲ್ಲಿ ಲಷ್ಕರ್ ತೈಬಾ ಅಡಗುತಾಣವನ್ನು ಭದ್ರತಾ ಪಡೆಗಳು ಶನಿವಾರ ಪತ್ತೆ ಹಚ್ಚಿದ್ದಾರೆ ಎಂದು ವರದಿಯಾಗಿದೆ . ಈ ವೇಳೆ ಲಷ್ಕರ್ ತೋಯಿಬಾದ ಭೂಗತ ಕಾರ್ಯಕರ್ತನಾಗಿ ಕೆಲಸ ಮಾಡುತ್ತಿದ್ದ ಜಹೂರ್ ವಾಹಿನಿಯನ್ನು ಪೊಲೀಸರು ಬಂಧಿಸಿದ್ದು ,ಬಂಧಿತನ್ ನಿಂದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿಗಳು ತಿಳಿಸಿವೆ .ಬಂಧಿತ ಉಗ್ರನ ಮನೆಯ ಸ್ವಲ್ಪ ದೂರದಲ್ಲಿ ಉಗ್ರರ ಅಡಗು ತಾಣ ಪತ್ತೆಯಾಗಿದ್ದು ಈ ಪ್ರದೇಶದಲ್ಲಿ ಉಗ್ರರಿಗೆ ಶಸ್ತ್ರಾಸ್ತ್ರ ಪೂರೈಕೆ ಮತ್ತು ಉಗ್ರರು ಸಂಚರಿಸಲು ಬೇಕಾದ ವಾಹನವನ್ನು ಪೂರೈಕೆ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ .

Comments