ತಂಟೆಕೋರ ಚೀನಾಗೆ ಅದರದ್ದೇ ರೀತಿಯಲ್ಲಿ ಬುದ್ದಿ ಕಲಿಸಲು ಮುಂದಾದ ಭಾರತ!

ಅಕ್ಕಪಕ್ಕದ ರಾಷ್ಟ್ರಗಳನ್ನು ಆಕ್ರಮಿಸುವುದು, ಗಡಿ ನಿಯಮಗಳನ್ನು ಉಲ್ಲಂಘಿಸುವುದು ಚೀನಾ ಕಳೆದ ಹಲವು ದಶಕಗಳಿಂದ ಮಾಡಿಕೊಂಡು ಬರುತ್ತಿದೆ. ಇದೀಗ ಭಾರತದ ಲಡಾಖ್ ಪ್ರದೇಶದ ಮೇಲೆ ಕಣ್ಣಾಕಿರುವ ಚೀನಾ ಇಂಡೋ ಚೀನಾ ಗಡಿ ಪ್ರದೇಶದಲ್ಲಿ ಸೇನೆ ನಿಯೋಜಿಸಿದೆ.

ಲಡಾಖ್ ನಲ್ಲಿ ಭಾರತ ಅಭಿವೃದ್ಧಿ ಕೆಲಸ ಮಾಡುತ್ತಿರುವುದಕ್ಕೆ ಕಿರಿಕ್ ಮಾಡುತ್ತಿರುವ ಚೀನಾ ಕಳೆದೊಂದು ವಾರದಿಂದ ಗಡಿ ಪ್ರದೇಶದಲ್ಲಿ ತಕರಾರು ಮಾಡುತ್ತಿದೆ. ಈ ಕುರಿತ ವಿಡಿಯೋವೊಂದು ಇಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಇದರಲ್ಲಿ ಚೀನಾದ ಸೈನಿಕರನ್ನು ಹಾಗೂ ವಾಹನಗಳನ್ನು ಹಿಮ್ಮೆಟ್ಟಿಸಿ ಒಬ್ಬ ಚೀನಿ ಸೈನಿಕನನ್ನು ಹಿಡಿದಿಟ್ಟ ವಿಡಿಯೋ ಒಂದು ವೈರಲ್ ಆಗಿತ್ತು.

ಇನ್ನು ಈ ವಿಚಾರದ ಬಗ್ಗೆ ಇನ್ನೊಂದು ಅಪ್ಡೇಟ್ ಲಭ್ಯವಾಗಿದ್ದು, ಚೀನಾದ ಕಿರಿಕಿರಿ ಇದ್ದಾಗ್ಯೂ ಸಹ ಲಡಾಖ್ ನಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ವೇಗ ನೀಡಲು ಭಾರತೀಯ ಸೇನೆ ಸಜ್ಜಾಗಿದ್ದು ಇದಕ್ಕಾಗಿ 11 ವಿಶೇಷ ರೈಲುಗಳಿಗೆ ಬೇಡಿಕೆ ಇಟ್ಟಿದ್ದು, 12000 ಕಾರ್ಮಿಕರು ಈ ರೈಲಿನಲ್ಲಿ ಲಡಾಖ್ ಬಳಿ ಇರುವ ಚೀನಾ ಗಡಿ ಸಮೀಪ ಅಭಿವೃದ್ಧಿ ಕಾರ್ಯಗಳನ್ನು ನಡೆಸಲಿದ್ದಾರೆ ಎನ್ನುವ ವಿಚಾರ ತಿಳಿದು ಬಂದಿದೆ.


Comments