ಮಂಗಳೂರು ನಗರಕ್ಕೆ ಆಗಮಿಸಿ ಸುತ್ತಾಡಿ ಸಂಚಲನ ಮೂಡಿಸಿದ್ದ ಕಾಡುಕೋಣವನ್ನು ಅರಣ್ಯ ಇಲಾಖೆ ಸಿಬ್ಬಂದಿ ಸೆರೆ ಹಿಡಿದು ಲಾರಿಯಲ್ಲಿ ಕೊಂಡು ಹೋಗುತ್ತಿದ್ದ ವೇಳೆ ಮಧ್ಯದಲ್ಲಿ ಸಾವನ್ನಪ್ಪಿತ್ತು .ಕಾಡುಕೋಣ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ಕೂಡ ವ್ಯಕ್ತವಾಗಿತ್ತು .ಕಾಡುಕೋಣ ಸಾವಿನ ಬಗ್ಗೆ ತನಿಖೆಯಾಗಬೇಕೆಂದು ಸಾಮಾಜಿಕ ಹೋರಾಟಗಾರ ಜೆರಾರ್ಡ ಟವರ್ ಅವರು ಬುಧವಾರ ಬರ್ಕೆ ಪೊಲೀಸ್ ಠಾಣೆಯಲ್ಲಿದೂರು ಕೂಡ ನೀಡಿದ್ದಾರೆ.
ಇನ್ನು ಮಂಗಳೂರು ನಗರಕ್ಕೆ ಈ ಕಾಡು ಕೋಣ ಹೇಗೆ ಬಂತು ಎಂಬ ಪ್ರಶ್ನೆ ಸಾಮಾಜಿಕ ಜಾಲತಾಣದಲ್ಲಿ ಜೋರಾಗಿ ಕೇಳಿಬರುತ್ತಿದೆ. ಈ ಕಾಡುಕೋಣ ಕುದ್ರೋಳಿ ಪರಿಸರದ ಕಸಾಯಿ ಖಾನೆಯಿಂದ ತಪ್ಪಿಸಿಕೊಂಡು ಬಂದು ಈ ರೀತಿಯ ಅವಾಂತರ ಸೃಷ್ಟಿಸಿದೆ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ .
ಕಸಾಯಿಖಾನೆಗಳಿಗೆ ಅಕ್ರಮವಾಗಿ ಅಭಯಾರಣ್ಯ ಗಳಿಂದ ಕಾಡುಕೋಣಗಳನ್ನು ಸಾಗಿಸಿ ದಂಧೆ ನಡೆಯುತ್ತಿದೆ ಎಂಬ ಆರೋಪ ಕೂಡ ಜೋರಾಗಿ ಕೇಳಿ ಬಂದಿದೆ .ಈ ನಿಟ್ಟಿನಲ್ಲಿ ನಗರದಲ್ಲಿರುವ ಕಸಾಯಿಖಾನೆ ವಿರುದ್ಧ ಕೂಡ ತನಿಖೆ ನಡೆಸಲು ಆಗ್ರಹಿಸಲಾಗಿದ್ದು, ಒಂದೇ ನಗರದಲ್ಲಿರುವ ಈ ಕಸಾಯಿ ಖಾನೆಯನ್ನು ಗ್ರಾಮಾಂತರ ಪ್ರದೇಶಕ್ಕೆ ಕೂಡಲೇ ವರ್ಗಾವಣೆ ಮಾಡಬೇಕು ಇಲ್ಲವೇ ಕಸಾಯಿಖಾನೆಯನ್ನು ಮುಚ್ಚಬೇಕು ಮತ್ತು ಕಾಡು ಕೋಣಗಳ ಅಕ್ರಮ ಸಾಗಾಟದ ಬಗ್ಗೆ ಕೂಲಂಕುಷ ತನಿಖೆಯಾಗಬೇಕೆಂದು ಸಾಮಾಜಿಕ ಕಾರ್ಯಕರ್ತರ ಅಭಿಪ್ರಾಯವಾಗಿದೆ .
ಇನ್ನು ಬುಧವಾರ ಕೂಡ ನಗರದಲ್ಲಿ ಮತ್ತೊಂದು ಕಾಡುಕೋಣ ಕಾಣಿಸಿಕೊಂಡಿದ್ದು ಈ ಕಾಡುಕೋಣದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ .ಮೊದಲು ಈ ಕಾಡುಕೋಣ ಕೂಳೂರು ಸೇತುವೆ ಬಳಿ ಕಾಣಿಸಿಕೊಂಡು ನಂತರ ಬೇರೆ ಕಡೆ ತೆರಳಿದ್ದು ಈ ನಡುವೆ ಕಾಡುಕೋಣವನ್ನು ಕಾಡಿಗೆ ಅಟ್ಟುವ ಕಾರ್ಯಾಚರಣೆ ರಾತ್ರಿವರೆಗೂ ಮುಂದುವರಿದಿತ್ತು ಎಂದು ವರದಿಯಾಗಿದೆ .

Comments
Post a Comment