ಕೇಸರಿ ಫ್ಲ್ಯಾಗ್ ಹಾಕಿಕೊಂಡು ವ್ಯಾಪಾರ ಮಾಡುತ್ತಿದ್ದಾನೆಂದು ಯೋಗಿ ಪೊಲೀಸರಿಗೆ ದೂರು! ಮತ್ತೇನಾಯ್ತು ನೋಡಿ!


ಕೊರೊನಾ ಅಟ್ಟಹಾಸದ ಈ ಸಂದರ್ಭದಲ್ಲಿ ತಬ್ಲೀಘಿ ಜಮಾತ್ ಬಹುಸಂಖ್ಯೆಯಲ್ಲಿ ಕೊರೊನಾ ಸೋಂಕಿತರನ್ನು ಸೃಷ್ಠಿ ಮಾಡಿದ್ದು, ಇದರಿಂದ ದೇಶದಲ್ಲಿ ಬಹುದೊಡ್ಡ ಅಭಿಯಾನವೇ ನಡೆಯುತ್ತಿದೆ. ಕೊರೊನಾ ಸೋಂಕು ಹರಡುತ್ತಿದ್ದಾರೆ ಎಂದು ಒಂದು ಸಮುದಾಯದ ಜೊತೆ ವ್ಯಾಪಾರ ಮಾಡಬೇಡಿ ಎನ್ನುವ ಅಭಿಯಾನಗಳು ಆರಂಭವಾಗಿದೆ.

ಇದರ ನಡುವೆ ಉತ್ತರ ಭಾರತದ ಬಹುತೇಕ ವ್ಯಾಪಾರಿಗಳು ತಮ್ಮ ಅಂಗಡಿ, ತಳ್ಳುಗಾಡಿಗಳಲ್ಲಿ ಕೇಸರಿ ಧ್ವಜ ಹಾಕಿಕೊಂಡು ವ್ಯಾಪಾರ ಮಾಡುತ್ತಿದ್ದಾರೆ. ಇದೀಗ ಇದೇ ವಿಚಾರವನ್ನು ಇಟ್ಟುಕೊಂಡು ತಹಜ್ಹಿಬ್ ಟಿವಿ ಇಂಡಿಯಾ ಎಂಬ ಟ್ವಿಟ್ಟರ್ ಖಾತೆಯಿಂದ ಕೇಸರಿ ಭಾಗವಧ್ವಜ ಹಾಕಿಕೊಂಡು ತರಕಾರಿ ವ್ಯಾಪಾರಿಯೊಬ್ಬ ವ್ಯವಹಾರ ಮಾಡುತ್ತಿದ್ದಾನೆ ಆತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ ಎಂದು ವಿಡಿಯೋ ಒಂದನ್ನು ಟ್ಯಾಗ್ ಮಾಡಿ ಉತ್ತರ ಪ್ರದೇಶದ ಯೋಗಿ ಪೊಲೀಸರಿಗೆ ದೂರು ನೀಡಲಾಗಿತ್ತು.

ಈ ದೂರಿಗೆ ಉತ್ತರ ಪ್ರದೇಶದ ಮೀರತ್ ಪೊಲೀಸರು ನೀಡಿರತಕ್ಕಂತಹ ಪ್ರತಿಕ್ರಿಯೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. "ನಾವು ಆ ವ್ಯಾಪಾರಿಗೆ ಲಾಕ್‌ಡೌನ್‌ ಸಮಯದಲ್ಲಿ ತರಕಾರಿ ಮಾರಲು ಅನುಮತಿ ನೀಡಿದ್ದೇವೆ. ಸಾಮಾಜಿಕ ಅಂತರ ಕಾಯ್ದುಕೊಂಡು ಲಾಕ್‌ಡೌನ್‌ ಕಾನೂನನ್ನು ಪಾಲಿಸುವಂತೆ ಸೂಚನೆ ನೀಡಲಾಗಿದೆ" ಎಂದು ಖಡಕ್ ಆಗಿಯೇ ಪ್ರತಿಕ್ರಿಯೆ ನೀಡಿದ್ದಾರೆ.




Comments