ಪಾಲ್ಗರ್ ನಲ್ಲಿ ಹತ್ಯೆಯಾದ ಸಾಧುಗಳ ಪರ ವಾದಿಸುತ್ತಿದ್ದ ವಕೀಲನ ನಿಗೂಢ ಸಾವು!

ಮಹಾರಾಷ್ಟ್ರದ ಪಾಲ್ಗರ್ ನಲ್ಲಿ ಇತ್ತೀಚಿಗೆ ಗುಂಪು ದಾಳಿಯಿಂದ ಹತ್ಯೆಯಾದ ಸಾಧುಗಳ ಪರ ವಕೀಲಿಕೆ ಮಾಡುತ್ತಿದ್ದ ದಿಗ್ವಿಜಯ್ ತ್ರಿವೇದಿ ಅವರು ರಸ್ತೆ ಅಪಘಾತವೊಂದರಲ್ಲಿ ಅಸುನೀಗಿದ್ದಾರೆ. ಇವರು ಸಾಧುಗಳ ಹತ್ಯಾ ಪ್ರಕರಣದ ವಿಚಾರಣೆಗೆಂದು ನ್ಯಾಯಾಲಯಕ್ಕೆ ತೆರಳುವ ವೇಳೆ ಈ ಘಟನೆ ನಡೆದಿದೆ. ಖಾಲಿ ಇರುವ ರಸ್ತೆಯಲ್ಲಿ ಅಪಘಾತ ನಡೆದಿದ್ದು ಹೇಗೆ ಈ ಅಪಘಾತದ ಹಿಂದೆ ಇರೋ ಕಾಣದ ಕೈ ಯಾವುದು? ಎಂದು ನೆಟ್ಟಿಗರು ಈ ಅಪಘಾತದ ಬಗ್ಗೆ ಶಂಕೆ ವ್ಯಕ್ತಪಡಿಸುತ್ತಿದ್ದು ಸಿಬಿಐ ತನಿಖೆಗೆ ಆಗ್ರಹಿಸುತ್ತಿದ್ದಾರೆ. ಈ ಘಟನೆಯ ಬಗ್ಗೆ ಇನ್ನಷ್ಟು ತನಿಖೆಯ ಬಳಿಕ ಸತ್ಯಾಸತ್ಯತೆ ಹೊರಬೀಳಬೇಕಿದೆ.

Comments