ಮುಂಬಯಿಯ ರೆಡ್ ಝೋನ್ ಪ್ರದೇಶದಲ್ಲಿ ಆರೆಸ್ಸೆಸ್ ನಿಂದ ಕೊರೊನಾ ಪರೀಕ್ಷೆ!

ದೇಶಕ್ಕೆ ಯಾವುದೇ ಸಂಕಷ್ಟ ಬರಲಿ ಹಿಂದೆ ಮುಂದೆ ನೋಡದೇ ನೆರವಿಗೆ ಧಾವಿಸೋ ದೇಶದ ಏಕೈಕ ಸಂಘಟನೆ ಆರೆಸ್ಸೆಸ್! ಇದೀಗ ದೇಶ ಕೊರೊನಾ ವೈರಸ್ ಹಾವಳಿಗೆ ಸಿಲುಕಿ ನಲುಗುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿದೆ. ದೇಶದ ವಾಣಿಜ್ಯ ನಗರಿ ಮುಂಬಯಿಯಂತೂ ಕೊರೊನಾ ಅಟ್ಟಹಾಸಕ್ಕೆ ನಲುಗಿ ಹೋಗಿದೆ. ಅಲ್ಲಿ ನೂರಾರು ಆರೋಗ್ಯ ಕಾರ್ಯಕರ್ತರು, ಪೊಲೀಸರು, ವೈದ್ಯರು ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ.

ಈ ಸಂದರ್ಭದಲ್ಲಿ ಇದೀಗ ಮಹಾರಾಷ್ಟ್ರದ ಸರಕಾರದ ನೆರವಿಗೆ ಆರೆಸ್ಸೆಸ್ ಕಾರ್ಯಕರ್ತರು ಧಾವಿಸಿದ್ದು, ರೆಡ್ ಝೋನ್ ಆಗಿರುವ ಪ್ರದೇಶಗಳಲ್ಲಿನ ಜನರ ಕೊರೊನಾ ಪರೀಕ್ಷೆ ನಡೆಸುತ್ತಿದ್ದಾರೆ. ಪಿಪಿಇ ಕಿಟ್ ಧರಿಸಿಕೊಂಡು ಈಗಾಗಲೇ 11,000 ಕ್ಕೂ ಹೆಚ್ಚು ಜನರ ಪರೀಕ್ಷೆ ನಡೆಸಿರುವ ಸ್ವಯಂಸೇವಕರ ನಡೆ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ.

Comments