ರಿಯಾಜ್ ನೈಕೂ ಸೇರಿ ಮತ್ತೆ ಮೂವರು ಉಗ್ರರನ್ನು ಹೊಡೆದುರುಳಿಸಿದ ಸೇನೆ

ದಕ್ಷಿಣ ಕಾಶ್ಮೀರ  ಪುಲ್ವಾಮಾದಲ್ಲಿ ಬುಧವಾರ ಭದ್ರತಾ ಪಡೆಗಳು ನಡೆಸಿದ ಎರಡು ಪ್ರತ್ಯೇಕ ಶೋಧ ಕಾರ್ಯಾಚರಣೆಯಲ್ಲಿ ಹಿಜ್ಬುಲ್ ಉಗ್ರ ಸಂಘಟನೆಯ ಹಿರಿಯ ಕಮಾಂಡರ್ ಸೇರಿ 4 ಉಗ್ರರು ಹತರಾಗಿದ್ದಾರೆ.

ಕಳೆದ ರಾತ್ರಿ ಉಗ್ರರು ಅಡಗಿರುವ  ಮಾಹಿತಿಯನ್ನಾಧರಿಸಿ, ಎರಡನೇ ಶೋಧ ಕಾರ್ಯಾಚರಣೆಯನ್ನು ಅವಂತಿಪೋರಾದ ಬೀಗ್‍ಪೋರದಲ್ಲಿ ಭಾರತೀಯ ಸೇನೆ ಆರಂಭಿಸಿತ್ತು. ಬುಧವಾರ ಬೆಳಿಗ್ಗೆ ಉಗ್ರರೊಂದಿಗೆ ಮುಖಾಮುಖಿಯಾಗಿದ್ದು, ಈ ಪ್ರದೇಶದಲ್ಲಿ ಮೊದಲು  ಉಗ್ರ  ಸಂಘಟನೆಯ ಉನ್ನತ ಕಮಾಂಡರ್ ರಿಯಾಜ್ ನೈಕೂ ಅನ್ನು ಸೇನಾಯೋಪಡೆಗಳು ಹೊಡೆದುರುಳಿಸಿದ್ದರು .ಇದೀಗ ಬಂದ ವರದಿಯ ಪ್ರಕಾರ ಪ್ರದೇಶದಲ್ಲಿ ಸೇನಾ ಪಡೆಗಳು ಇನ್ನು ಮೂವರು ಉಗ್ರರನ್ನು ಹೊಡೆದುರುಳಿಸಲಾಗಿದೆ ಎಂದು ವರದಿಗಳು ತಿಳಿಸಿವೆ .

Comments