ಭಾರತದ ಆಂತರಿಕ ವಿಚಾರದಲ್ಲಿ ಯಾವ ಕಾರಣಕ್ಕೂ ತಲೆ ಹಾಕುವುದಿಲ್ಲ ಎಂದ ತಾಲಿಬಾನ್‌

ಅಫ್ಘಾನಿಸ್ತಾನದಲ್ಲಿ ಅಮೆರಿಕಕ್ಕೆ ತಲೆನೋವಾದ ತಾಲಿಬಾನ್ ಭಾರತದ ಮುಂದೆ ಮಂಡಿಯೂರಿದೆ. ಕಾಶ್ಮೀರದಲ್ಲಿ ಪಾಕಿಸ್ತಾನ ಪ್ರೇರಿತ  ಭಯೋತ್ಪಾದನೆಗೆ ತಾಲಿಬಾನ್ ಸೇರಬಹುದೆಂಬ  ಹಲವು ವರದಿಗಳು  ಮಾಧ್ಯಮದಲ್ಲಿ ಪ್ರಸಾರವಾಗಿತ್ತು. ಈ ಕುರಿತು ಸ್ಪಷ್ಟನೆ ನೀಡಿರುವ  ತಾಲಿಬಾನ್  ಈ  ಮಾಧ್ಯಮ ವರದಿಗಳನ್ನು ನಿರಾಕರಿಸಿದೆ ಮತ್ತು ನಾವು ಯಾವುದೇ ಕಾರಣಕ್ಕೂ ಭಾರತದ  ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಸ್ಪಷ್ಟ ಪಡಿಸಿದೆ.

ತಾಲಿಬಾನ್ ಕಾಶ್ಮೀರದಲ್ಲಿ ಜಿಹಾದ್  ಸಾರುವ  ಬಗ್ಗೆ ಮಾಧ್ಯಮಗಳಲ್ಲಿ ಪ್ರಕಟವಾದ ಹೇಳಿಕೆ ತಪ್ಪಾಗಿದೆ. ಇಸ್ಲಾಮಿಕ್  ನೀತಿಯು ಇತರ ದೇಶಗಳ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂಬುದು ಸ್ಪಷ್ಟವಾಗಿದೆ ಎಂದು ಇಸ್ಲಾಮಿಕ್ ಎಮಿರೇಟ್ ಆಫ್ ಅಫ್ಘಾನಿಸ್ತಾನದ ವಕ್ತಾರ ಸುಹೇಲ್ ಶಾಹೀನ್ ಸೋಮವಾರ ಸಂಜೆ ಟ್ವೀಟ್ ಮಾಡಿದ್ದಾರೆ.

ಕಾಶ್ಮೀರ ವಿವಾದ ಬಗೆಹರಿಯದ ಹೊರತು ಭಾರತದೊಂದಿಗೆ ಸ್ನೇಹ ಬೆಳೆಸುವುದು ಅಸಾಧ್ಯ ಹಾಗೂ ಕಾಬೂಲ್‌ನಲ್ಲಿ ಅಧಿಕಾರವನ್ನು ವಶಪಡಿಸಿಕೊಂಡ ನಂತರ ಕಾಶ್ಮೀರವನ್ನು ನಾಸ್ತಿಕರಿಂದಲೂ ವಶಪಡಿಸಿಕೊಳ್ಳಲಾಗುವುದು ಎಂದು ತಾಲಿಬಾನ್ ವಕ್ತಾರ ಜಬಿಹುಲ್ಲಾ ಮುಜಾಹಿದ್ ಹೇಳಿದ್ದಾರೆ ಎನ್ನಲಾದ ಹೇಳಿಕೆಗಳ ಸ್ಪಷ್ಟತೆಯನ್ನು ಪಡೆಯುತ್ತಿರುವ ಒಂದು ದಿನದ ಬೆನ್ನಲ್ಲೆ ತಾಲಿಬಾನ್‌ನಿಂದ ಪ್ರಬಲವಾದ ಸ್ಪಷ್ಟತೆ ಭಾರತದ ಪರ ಸಿಕ್ಕಿದೆ.


ಭಾರತಕ್ಕೆ ಸಂಬಂಧಿಸಿದ ಜಮ್ಮು ಮತ್ತು ಕಾಶ್ಮೀರದ ಬಗ್ಗೆ ವರದಿಗಳನ್ನು ದೃಢೀಕರಿಸಲು ಭಾರತವು ಪರೋಕ್ಷವಾಗಿ ಕೆಲಸ ಮಾಡಿದ ನಂತರ ತಾಲಿಬಾನ್ ವಕ್ತಾರರು ಈ ಕುರಿತು ಸ್ಪಷ್ಟೀಕರಣ ನೀಡಿದ್ದಾರೆ ಎಂದು ಕಾಬೂಲ್ ಮತ್ತು ದೆಹಲಿ ಮೂಲದ ರಾಜತಾಂತ್ರಿಕರು ಹಿಂದೂಸ್ತಾನ್ ಟೈಮ್ಸ್‌ಗೆ ತಿಳಿಸಿದ್ದಾರೆ.

Comments