ಹಸಿದವರಿಗೆ ಅನ್ನಪೂರ್ಣೆಯಾದ ತೇಜಸ್ವಿನಿ ಅನಂತ್ ಕುಮಾರ್

ಕೊರೊನಾ ನಿಯಂತ್ರಣ ಮಾಡುವ ಹಿನ್ನೆಲೆಯಲ್ಲಿ ಹಲವು  ದಿನಗಳಿಂದ   ರಾಜ್ಯಾದ್ಯಂತ ಜಾರಿ ಮಾಡಿದ   ಲಾಕ್‌ಡೌನ್  ಅನ್ನು ಕೊಂಚ   ಸಡಿಲಿಕೆ  ಮಾಡಲಾಗಿದೆ.ವಲಸಿಗ ಕಾರ್ಮಿಕರಿಗೂ ತಮ್ಮ  ಊರಿಗೆ  ತೆರಳಲು  ಅವಕಾಶ ನೀಡಲಾಗಿದೆ.ಈ ನಿಟ್ಟಿನಲ್ಲಿ ಹಲವು ಕಾರ್ಮಿಕರು ತಮ್ಮ  ಊರಿಗೆ  ತೆರಳುತ್ತಿದ್ದು .ಇನ್ನು  ಕೂಡ  ಹಲವು ಕಾರ್ಮಿಕರು ಅತಂತ್ರರಾಗಿದ್ದಾರೆ . ಇಂತಹ ಜನರ ಸಹಾಯಕ್ಕೆ ಅದಮ್ಯ ಚೇತನ ಸಂಸ್ಥೆ ಮುಂದೆ ಬಂದಿದೆ

ಅದಮ್ಯ ಚೇತನ ಸಂಸ್ಥೆಯ ಮುಖ್ಯಸ್ಥೆ ಡಾ. ತೇಜಸ್ವಿನಿ ಅನಂತಕುಮಾರ್ ಅವರು ಕಳೆದ ರಾತ್ರಿ ಸುಮಾರು  ೯ ಗಂಟೆಗೆ ೨೦೦೦ ವಲಸಿಗ ಕಾರ್ಮಿಕರು  ಹಸಿದ್ದಿದ್ದಾರೆ ಎಂಬ  ಕರೆ ಸ್ವೀಕರಿಸಿದ್ದಾರೆ.ಈ ವೇಳೆ ಕೂಡಲೇ ಕಾರ್ಯಪ್ರವತ್ತರಾದ ತೇಜಸ್ವಿನಿ ಅನಂತಕುಮಾರ್ ಅವರು ಅದಮ್ಯ ಚೇತನ ಅಡುಗೆ ಮನೆಯಲ್ಲಿ  ತಮ್ಮ ತಂಡದೊಂದಿದೆ  ಆಗಮಸಿ ಒಂದೂವರೆ ಗಂಟೆಯೊಳಗೆ ಬೇಕಾದ  ಆಹಾರವನ್ನು ಸಿದ್ದ ಪಡಿಸಿದ್ದಾರೆ ಮತ್ತು ಹಸಿದ ಕಾರ್ಮಿಕರ ಹೊಟ್ಟೆಯನ್ನು ತುಂಬಿದ್ದಾರೆ  .ತೇಜಸ್ವಿನಿ ಅನಂತಕುಮಾರ್ ಅವರ ಈ ಕಾರ್ಯವೈಖರಿಗೆ ಸಾಮಾಜಿಕ ಜಾಲ ತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

ರಾಜ್ಯಾದ್ಯಂತ ಸಂಪೂರ್ಣ ಲಾಕ್‌ಡೌನ್ ಜಾರಿಯಲ್ಲಿರುವ ಸಂದರ್ಭ ಕೂಡ ಅದಮ್ಯ ಚೇತನ ಸಂಸ್ಥೆಬಡ ಜನರು, ದಿನಕೂಲಿ ಕಾರ್ಮಿಕರು, ನಿರ್ಗತಿಕರಿಗೆ  ಊಟ ತಲುಪಿಸುವ ಯೋಜನೆಯನ್ನು  ಮಾಡಿದೆ.

Comments