ತನ್ನ ವಿರುದ್ಧ ಸುಳ್ಳು ಆರೋಪ ಮಾಡಿದ ವಿಶ್ವಸಂಸ್ಥೆ ಅಧಿಕಾರಿಯನ್ನು ಬಿಡಲಿಲ್ಲ ಸುಬ್ರಮಣಿಯನ್ ಸ್ವಾಮಿ

ಬಿಜೆಪಿ ನಾಯಕ ಖ್ಯಾತ ವಕೀಲ ಸುಬ್ರಮಣಿಯನ್ ಸ್ವಾಮಿ ವಿರುದ್ಧ ಸುಳ್ಳು ಆರೋಪ ಮಾಡಿದರೆ ಸಂಕಷ್ಟ  ತಪ್ಪಿದ್ದಲ್ಲ ಎಂದು  ಹಲವು ಬಾರಿ ಸಾಬೀತಾಗಿದೆ.ಈ ಬಾರಿ ತನ್ನ ವಿರುದ್ಧ ಸುಳ್ಳು ಆರೋಪ ಮಾಡಿದ ವಿಶ್ವಸಂಸ್ಥೆ ಅಧಿಕಾರಿಗೆ ಸುಬ್ರಮಣಿಯನ್ ಸ್ವಾಮಿ  ಅವರು  ಕಾನೂನಿನ ಕುಣಿಕೆಯನ್ನು ಬಿಸಿದ್ದಾರೆ.

ವಿಶ್ವ ಸಂಸ್ಥೆ ಮುಖ್ಯ ಕಾರ್ಯದರ್ಶಿ ಅಡಮಾ ಡಿಯಿಂಗ್ ಭಾರತದಲ್ಲಿನ ಪೌರತ್ವ ಕಾಯ್ದಿ ತಿದ್ದುಪಡಿ ಕುರಿತು ಮಾಡಿದ  ಭಾಷಣ ವೇಳೆ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ವಿರುದ್ಧ ಗಂಭೀರ ಆರೋಪ  ಮಾಡಿದ್ದರು . ಭಾರತದಲ್ಲಿ ಎಲ್ಲರೂ ಸಮಾನರಲ್ಲ ಅದರಲ್ಲೂ ಮುಸ್ಲಿಂ ಸಮುದಾಯ  ಸಮಾನ ವರ್ಗದಲ್ಲಿಲ್ಲ ಎಂದು ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ. ಈ ಹೇಳಿಕೆ ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ. ಸ್ವಾಮಿ ಇದಕ್ಕೆ ದಂಡ ತೆರಬೇಕಾಗುತ್ತದೆ ಎಂದು ಅಡಮಾ ಡಿಯಿಂಗ್ ಹೇಳಿದ್ದರು.

ವಿಶ್ವ ಸಂಸ್ಥೆ ಅಧಿಕಾರಿ ಹೇಳಿಕೆಯಿಂದ ಆಕ್ರೋಶಗೊಂಡಿದ್ದ ಸುಬ್ರಮಣಿಯನ್ ಸ್ವಾಮಿ ಕಟ್ ಅಂಡ್ ಪೇಸ್ಟ್ ಪ್ರೊಡಕ್ಷನ್" ನ ಫಲವಾಗಿದೆ ಸುಳ್ಳು ಆರೋಪ ಮಾಡಿದ ಅಧಿಕಾರಿ ವಿರುದ್ಧ ಮಾನನಷ್ಟ ಪ್ರಕರಣ ದಾಖಲಿಸಲಿಸಿದ್ದರು.ಸದ್ಯ ಈ ಮಾಹಿತಿಯನ್ನು ಟ್ವಿಟ್ಟರ್ ಮೂಲಕ ಸ್ವಾಮಿ ತಿಳಿಸಿದ್ದು ,ಸುಬ್ರಮಣಿಯನ್ ಸ್ವಾಮಿ ಅವರ ಕಾನೂನು ಹೋರಾಟಕ್ಕೆ  ಬಿಜೆಪಿ ನಾಯಕರು ಬೆಂಬಲ ಸೂಚಿಸಿದ್ದಾರೆ.


Comments