ಸೂಕ್ಷ್ಮ ಪ್ರದೇಶಗಳಲ್ಲಿ ಸರ್ವಸಜ್ಜಿತ ವಾಗಿ ಸೇನಾ ಪಡೆಗಳನ್ನು ಸಿದ್ಧಗೊಳಿಸಿದ್ದೇವೆ :ಎಲ್ಲದಕ್ಕೂ ಸಿದ್ಧ ಎಂದ ವಾಯುಸೇನೆ

ಲಡಾಕ್  ಗಡಿಯಲ್ಲಿ ಚೀನಾ ಅಟ್ಟಹಾಸ ಮೆರೆದ ಕುರಿತು ಪ್ರತಿಕ್ರಿಯೆ ನೀಡಿರುವ ವಾಯುಪಡೆ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಆರ್ ಕೆ  ಭಾದೌರಿಯಾ   ಅವರು ಹೈದರಾಬಾದ್ನ ಏರ್ ಫೋರ್ಸ್ ಅಕಾಡೆಮಿ ಕಾರ್ಯಕ್ರಮವೊಂದರಲ್ಲಿ ನೀಡಿದ ಪ್ರತಿಕ್ರಿಯೆಯಲ್ಲಿ ಅತ್ಯಂತ ಸೂಕ್ಷ್ಮ ಸನ್ನಿವೇಶ ಎದುರಾದಲ್ಲಿ ನಾವು ಸರ್ವ ಸನ್ನದ್ಧವಾಗಿದ್ದು, ಯುದ್ಧಕ್ಕೂ ಸಿದ್ಧರಿದ್ದೇವೆ ಎಂಬ ಕಠಿಣ ಸಂದೇಶವನ್ನು ಚೀನಾಕ್ಕೆ ರವಾನಿಸಿದ್ದಾರೆ.


 ನಾವು ಯುದ್ಧವನ್ನು ಬಯಸುವವರಲ್ಲ ಆದರೆ ಅಂಥ ಪರಿಸ್ಥಿತಿ ಎದುರಾದರೆ ಸುಮ್ಮನಿರುವುದಿಲ್ಲ ಎಂದಿದ್ದಾರೆ .ಶುಕ್ರವಾರವಷ್ಟೇ ಲಡಾಕ್  ಪ್ರದೇಶದಲ್ಲಿ ಸದ್ದಿಲ್ಲದೇ ಪರಿಶೀಲನೆ ನಡೆಸಿ ಬಂದಿರುವ ಏರ್ಚೀಫ್ ಮಾರ್ಷಲ್ ಅವರು ದೇಶಕ್ಕೆ ಈ ಭರವಸೆಯನ್ನು ನೀಡಿದ್ದಾರೆ .

ಚೀನಿ ಸೈನಿಕರ  ಅಟ್ಟಹಾಸಕ್ಕೆ ಬಲಿಯಾದ ಇಪ್ಪತ್ತು ಯೋಧರ ಬಲಿದಾನ ವ್ಯರ್ಥವಾಗುವುದಿಲ್ಲ .ಮೇ ಆರಂಭದಲ್ಲಿ ಪ್ರಮುಖ ವಾಯುನೆಲೆಗಳಲ್ಲಿ ಯುದ್ಧ ವಿಮಾನವನ್ನು ಜಮಾವಣೆ ಮಾಡಿದ್ದೀವಿ ಕೇವಲ ಲೇಹ್ ಮತ್ತು ಶ್ರೀ ನಗರವಲ್ಲ ನಮ್ಮ ವಾಯುಪಡೆ ಅತಿ ಎತ್ತರ ಮತ್ತು ದುರ್ಗಮ ಪ್ರದೇಶಗಳನ್ನು ಸೆಣಸುವಷ್ಟು ಪ್ರಬಲವಾಗಿದೆ ಎಂದಿದ್ದಾರೆ .  ಲಡಾಕ್ನ ಪ್ರದೇಶ ಸಂಪೂರ್ಣ ನಿಯಂತ್ರಣದಲ್ಲಿದೆ ಭಾರತೀಯ ಸೇನಾ ಪಡೆ ಈ ಪ್ರದೇಶವನ್ನು ಹತೋಟಿಯಲ್ಲಿ ಇರಿಸಿಕೊಂಡಿದೆ ಎಂದಿದ್ದಾರೆ

Comments