ಚೀನಿ ಸೈನಿಕರ ಶವ ಸಾಗಿಸಲು ಧಾವಿಸಿದ ಚೀನೀ ಹೆಲಿಕಾಪ್ಟರ್‌ಗಳು

ಭಾರತ ಚೀನಾ  ಗಡಿ ಸಂಘರ್ಷ ತಾರಕಕ್ಕೇರಿದ್ದು . ಉಭಯ ದೇಶಗಳ ವಾಸ್ತವ ಗಡಿ ನಿಯಂತ್ರಣ ರೇಖೆ  ಬಳಿ ಚೀನಾ ಸೇನೆಯ ಹೆಲಿಕಾಪ್ಟರ್‌ಗಳ ಹಾರಾಟ ತೀವ್ರಗೊಂಡಿದೆ. ಸೋಮವಾರ ರಾತ್ರಿ ಹಾಗೂ ಮಂಗಳವಾರ ಉಭಯ ಸೇನೆಗಳ ನಡುವೆ ನಡೆದ ಸಂಘರ್ಷದ ವೇಳೆ ಭಾರತ ಸೇನೆಯ 20 ಯೋಧರು ಹುತಾತ್ಮರಾದ ಮಾಹಿತಿ ಹೊರಬಿದ್ದದೆ. ಅಷ್ಟೇ ಅಲ್ಲ, ಚೀನಾ ಸೇನೆಯ 43 ಯೋಧರು ಸಾವನ್ನಪ್ಪಿರುವ, ಗಾಯಗೊಂಡಿರುವ ವರದಿಗಳು ಹೊರಬೀಳುತ್ತಿವೆ.

ಸೋಮವಾರ ಹಾಗೂ ಮಂಗಳವಾರ (ಜೂನ್ 15,16 ) ನಡೆದ ಸಂಘರ್ಷದ ಬಳಿಕ, ಚೀನಾ ಸೇನೆಯ ಹೆಲಿಕಾಪ್ಟರ್‌ಗಳು ತನ್ನ ಸೇನೆಯ ಮೃತ ಯೋಧರ ಶವ ಸಾಗಿಸಲು ಹಾಗೂ ಗಾಯಗೊಂಡವರನ್ನು ರಕ್ಷಿಸಲು ಧಾವಿಸಿದೆ. ಚೀನಿ ಹೆಲಿಕಾಪ್ಟರ್‌ಗಳ ಹಾರಾಟವನ್ನು ಭಾರತೀಯ ಸೇನೆ ಗುರುತಿಸಿದೆ.ಎಂದು ವರದಿಯಾಗಿದೆ.

Comments