ಚೀನಾ ವಸ್ತುಗಳ ಬಳಕೆಗೆ ನಿಷೇಧ ಹೇರುವ ಅಭಿಯಾನ :ಬೆದರಿದ ಚೀನಾ !

ಲಡಾಕ್  ಗಡಿಯಲ್ಲಿ ಚೀನಿ ಸೈನಿಕರು ತೋರಿರುವ ಅಟ್ಟಹಾಸದ ಕುರಿತು ಭಾರತದಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದೆ.ಭಾರತೀಯ ಸೈನಿಕರ ಬಲಿದಾನ ವ್ಯರ್ಥವಾಗುವುದಿಲ್ಲ ಎಂದು ಪ್ರಧಾನಿ ಮೋದಿಯವರು ಎಚ್ಚರಿಕೆ ನೀಡಿದ ನಂತರದ ಬೆಳವಣಿಗೆಯಲ್ಲಿ ಭಾರತೀಯರು ಚೀನಿ  ವಸ್ತುಗಳ ವಿರುದ್ಧ ಬಹಿಷ್ಕಾರ ಘೋಷಿಸಿದ್ದಾರೆ ಈ ಘೋಷಣೆಯಿಂದ ಚೀನಾ ಯುದ್ಧಕ್ಕೆ ಮೊದಲೇ ಸೋಲೊಪ್ಪಿಕೊಂಡಂತೆ ಕಾಣುತ್ತಿದೆ .ಇದಕ್ಕೆ ಪೂರಕವಾಗಿ ಪ್ರತಿಕ್ರಿಯೆ ನೀಡಿರುವ ಚೀನಾ ವಿದೇಶಾಂಗ ಇಲಾಖೆ ವಕ್ತಾರ  ಜಾವೋ ಲಿಜಿಯಾನ್ ನೀಡಿದ ಪ್ರತಿಕ್ರಿಯೆಯಲ್ಲಿ  ಉಭಯ ದೇಶಗಳ ನಡುವೆ ಶಾಂತಿ ಮಾತುಕತೆ ನಡೆಯುತ್ತಿದೆ ಎಂದು ಹೆಚ್ಚಿನ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.ಅದಾಗ್ಯೂ ಗಡಿಯಲ್ಲಿ ನಡೆದ ಹಿಂಸಾತ್ಮಕ ಘರ್ಷಣೆಗೆ ತಾನು ಕಾರಣವಲ್ಲ ಎನ್ನುತ್ತಿರುವ ಚೀನಾ, ಭಾರತದಲ್ಲಿ ಚೀನಾ ವಸ್ತುಗಳ ವಿರುದ್ಧ ನಡೆಯುತ್ತಿರುವ ಅಭಿಯಾನದ ಕುರಿತೂ ತಲೆ ಕೆಡಿಸಿಕೊಂಡಿರುವುದು ಸ್ಪಷ್ಟವಾಗಿ ಗೋಚರವಾಗುತ್ತಿದೆ.

Comments