ವಾರದ ಹಿಂದೆ ಗಲ್ವಾನ್ ಕಣಿವೆಯ ಭಾರತದ ಭೂಪ್ರದೇಶದಲ್ಲಿ ಚೀನಿ ಸೈನಿಕರು ಅಕ್ರಮವಾಗಿ ನಿರ್ಮಿಸಿದ್ದ ಟೆಂಟ್ ತೆರವುಗೊಳಿಸುವ ವೇಳೆ ಭಾರತ ಮತ್ತು ಚೀನಿ ಸೈನಿಕರ ನಡುವೆ ನಡೆದ ಸಂಘರ್ಷದಿಂದ ಪರಿಸ್ಥಿತಿ ಈಗಲೂ ಕೂಡ ಬೂದಿ ಮುಚ್ಚಿದ ಕೆಂಡದಂತಿದೆ.ಅಂದು ರಾತ್ರಿ ಗಡಿಯಲ್ಲಿ ನಡೆದಿದ್ದೇನು ಎನ್ನುವುದರ ಖಚಿತ ಮಾಹಿತಿಯನ್ನು ಭಾರತೀಯ ಸೇನಾ ಮೂಲಗಳು ಬಹಿರಂಗಪಡಿಸಿವೆ.
ಸೇನಾ ಮೂಲಗಳು ತಿಳಿಸಿರುವ ಪ್ರಕಾರ ಗಡಿಯಿಂದ ಸೇನೆ ಹಿಂತೆಗೆದ ಕುರಿತು ಕಮಾಂಡರ್ ಮಟ್ಟದಲ್ಲಿ ಸಂಧಾನ ಸಭೆ ನಡೆಯುತ್ತಿದ್ದ ಸಂದರ್ಭದಲ್ಲಿಯೇ ಲಡ್ಡಾಕ್ ನ ಭಾರತೀಯ ಭೂ ಪ್ರದೇಶದಲ್ಲಿ ಚೀನೀ ಸೈನಿಕರು ಅಕ್ರಮವಾಗಿ ಟೆಂಟ್ ಹಾಕಿ ಪ್ರದೇಶದಲ್ಲಿ ನಿಗಾ ವಹಿಸಿದ್ದರು . ಇದನ್ನು ಕಂಡ ಭಾರತೀಯ ಸೇನಾ ಪಡೆಗಳು ಪ್ರದೇಶವನ್ನು ಕೂಡಲೇ ಖಾಲಿ ಮಾಡುವಂತೆ ತಿಳಿಸಿತ್ತು. ಸುಮಾರು ೧೦-೧೨ ಯೋಧರ ಚಿಕ್ಕ ತಂಡ ಅಲ್ಲಿತ್ತು. ಮಾತುಕತೆ ನಡೆಯುವ ವೇಳೆ ಭಾರತೀಯ ಸೈನಿಕರು ಅದೆಷ್ಟೇ ಬುದ್ಧಿ ಹೇಳಿದರೂ ಚೀನೀ ಸೈನಿಕರು ಮಣಿಯಲಿಲ್ಲ.
ಕೊನೆಗೆ ಭಾರತೀಯ ಸೇನೆಯ ಯೋಧರು ಸೇನಾ ನೆಲೆಗೆ ಹಿಂತಿರುಗಿ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ನಂತರ ಬಿಹಾರ ರೆಜಿಮೆಂಟಿನ ಕರ್ನಲ್ ಸಂತೋಷ್ ಬಾಬು ನೇತೃತ್ವದಲ್ಲಿ ಐವತ್ತು ಯೋಧರು ಚೀನಾಗಳು ಆಕ್ರಮಿಸಿದ್ದ ಪ್ರದೇಶಕ್ಕೆ ತೆರಳಿದರು . ಏತನ್ಮಧ್ಯೆ ಟೆಂಟ್ನಲ್ಲಿದ್ದ ಚೀನಿ ಯೋಧರು ತುರ್ತಾಗಿ ತಮ್ಮ ಸೇನಾ ನೆಲೆಗಳಿಗೆ ಮಾಹಿತಿ ನೀಡಿದರು .ಕೂಡಲೇ ಮುನ್ನೂರಕ್ಕೂ ಹೆಚ್ಚು ಚೀನಿ ಸೈನಿಕರು ಕ್ಷಣಾರ್ಧದಲ್ಲಿ ಸ್ಥಳಕ್ಕೆ ಧಾವಿಸಿ ಆಯಾ ಸ್ಥಳಗಳಲ್ಲಿ ಕಲ್ಲು, ಕಟ್ಟಿಗೆ, ಮೊಳೆಗಳನ್ನು ಹಿಡಿದ ರಾಡುಗಳನ್ನು ಕುಳಿತಿದ್ದರು.
ಸ್ಥಳಕ್ಕೆ ಆಗಮಿಸಿದ ಭಾರತೀಯ ತಂಡ ಮೊದಲು ಸಂಧಾನಕ್ಕೆ ಮೊರೆಹೋಯಿತು. ಎಷ್ಟು ತಿಳಿ ಹೇಳಿದರೂ ಕೇಳದ ಚೀನಿ ಸೈನಿಕರು ಸಂಧಾನಕ್ಕೆ ಬಂದವರ ಮೇಲೆ ಎರಗಿ ಬಿದ್ದರು. ಬೆದರದ ಭಾರತೀಯ ಸೈನಿಕರ ತಂಡ ಬಲವಂತದಿಂದಲೇ ಸ್ಥಳದಲ್ಲಿದ್ದ ಟೆಂಟುಗಳನ್ನು ಪುಡಿಪುಡಿ ಮಾಡಿ ಬಿಸಾಡಿತ್ತು.ಇದೆಲ್ಲದರ ನಡುವೆ ಅವಿತು ಕುಳಿತಿದ್ದ ಚೀನಿ ಸೈನಿಕರು ಹಠಾತನೇ ಕಲ್ಲು ಕಟ್ಟಿಗೆಯ ತುಂಡುಗಳಿಂದ ದಾಳಿ ನಡೆಸಿದರು .
ಧೃತಿಗೆಡದ ಕರ್ನಲ್ ಸಂತೋಷ್ ಬಾಬು ಅವರು ಮುಂಚೂಣಿಯಲ್ಲಿ ನಿಂತು ಚೀನಿ ಸೈನಿಕರ ವಿರುದ್ಧ ಹೋರಾಡಿದರು. ಉಳಿದ ಯೋಧರು ಕೂಡ ಸನ್ನಿವೇಶದ ಸೂಕ್ಷ್ಮತೆಯನ್ನು ಅರಿತು ಮೈಕೊಡವಿ ಎದ್ದು ಸಿಕ್ಕ ಸಿಕ್ಕ ಎದುರಾಳಿಗಳ ಮೇಲೆ ಎರಗಿದರು.ಚೀನಿ ಸೈನಿಕರು ಮಾತ್ರ ಅಡಗಿಕೊಂಡು ಕಲ್ಲು ತೂರುತ್ತಾ ತಮ್ಮ ಕುಕೃತ್ಯವನ್ನು ಮುಂದುವರಿಸಿದರು. ಶತ್ರು ಪಡೆಯ ಸಂಖ್ಯಾಬಲ ವಿಪರೀತವಿದ್ದರೂ ಎದೆಗುಂದದ ಬಿಹಾರ ರೆಜಿಮೆಂಟಿನ ಯೋಧರು ಬರೋಬ್ಬರಿ ಮೂರು ಗಂಟೆಗಳ ಕಾಲ ರಕ್ತಸಿಕ್ತ ಹೋರಾಟ ನಡೆಸಿದರು.
ಎರಡೂ ಕಡೆಗೂ ಹತ್ತಾರು ಯೋಧರು ಪ್ರಾಣ ಬಿಟ್ಟರು ಕತ್ತಲು ಆವರಿಸುವವರೆಗೂ ಈ ಹೋರಾಟ ಮುಂದುವರಿಯಿತು. ಮರುದಿನ ಮುಂಜಾನೆ ಸ್ಥಳಕ್ಕೆ ಆಗಮಿಸಿದ ಭಾರತೀಯ ಹಿರಿಯ ಸೇನಾಧಿಕಾರಿಗಳಿಗೆ ಅಲ್ಲಿ ಕಂಡಿದ್ದು ರಕ್ತಸಿಕ್ತವಾದ ಮಣ್ಣು ಚೆಲ್ಲಾಪಿಲ್ಲಿಯಾಗಿದ್ದ ಮೃತ ಚೀನಿ ಯೋಧರ ಮೃತದೇಹಗಳು .ಸಮಾಧಾನದಿಂದಲೇ ಭಾರತೀಯ ಭದ್ರತಾ ಪಡೆಗಳು ಮೃತ ದೇಹಗಳನ್ನು ಚೀನಾಗಳಿಗೆ ಒಪ್ಪಿಸಿದರು. ಈ ಹೋರಾಟದಲ್ಲಿ ಭಾರತದ ನೂರು ಯೋಧರು ಪಾಲ್ಗೊಂಡರೆ ಚೀನಾದ 350 ಯೋಧರು ಬಡಿದಾಡಿದರು. ಈ ಹೋರಾಟದಲ್ಲಿ ಭಾರತೀಯ ಯೋಧರು ಚೀನಾಗಳ ಟೆಂಟ್ ಗಳನ್ನು ಪುಡಿಪುಡಿ ಮಾಡಿ ತಾವು ನಿರ್ಧರಿಸಿದ್ದನ್ನು ಸಾಧಿಸಿದರು.
ತನ್ನ ಮುಖ್ಯ ನೆಲೆಯಲ್ಲಿ ಯುದ್ಧಕ್ಕೆ ಸಿದ್ಧವಾಗುವಂತೆ ಸೂಚಿಸಿದ್ದು ಇದಕ್ಕೆ ಭಾರತ ಪ್ರತಿಯಾಗಿ ಯುದ್ಧ ನೆಲೆಗಳನ್ನು ನಿರ್ಮಿಸಿ ಚೀನಾಕ್ಕೆ ಸೆಡ್ಡು ಹೊಡೆದಿದೆ. ಸದ್ಯ ಪ್ರದೇಶದಲ್ಲಿ ಯುದ್ದ ಕಾರ್ಮೋಡ ಹೆಚ್ಚಿಸಿದ್ದು,ಯಾವ ಸಮಯದಲ್ಲಿ ಏನಾಗುತ್ತದೋ ಎಂಬುದನ್ನು ಕಾದು ನೋಡಬೇಕಿದೆ

Comments
Post a Comment