ಭಾರತಕ್ಕೆ ಆರ್ಥಿಕ ಸಹಾಯ ಮಾಡಲು ಸಿದ್ದ ಎಂದ ಇಮ್ರಾನ್ ಖಾನ್ ಗೆ ಭಾರತ ನೀಡಿದ ಪ್ರತಿಕ್ರಿಯೆ ಹೇಗಿತ್ತು ನೋಡಿ

ಲಾಕ್‌ಡೌನ್ ನಿಂದಾಗಿ  ಭಾರತದ ಬಡವರ್ಗ ಅತ್ಯಂತ ಸಂಕಷ್ಟಕ್ಕೆ ಸಿಲುಕಿದೆ, ಈ ವೇಳೆ ಪಾಕಿಸ್ತಾನ ಹೇಗೆ ಬಡ ಜನತೆಗೆ ಹಣ ವರ್ಗಾವಣೆ ಮಾಡುವಲ್ಲಿ ಹೇಗೆ ಯಶಸ್ವಿಯಾಯಿತು ಎಂಬುದನ್ನು ಭಾರತಕ್ಕೆ ಹೇಳಿ ಕೊಡಲು ಸಿದ್ಧ ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಟ್ವೀಟ್ ಮಾಡಿದ್ದಾರೆ.

ಪಾಕಿಸ್ತಾನ ಬಡ ಜನತೆಗೆ ನೇರವಾಗಿ ಹಣ ವರ್ಗಾವಣೆ ಮಾಡುವಲ್ಲಿ ಯಶಸ್ವಿಯಾಗಿದ್ದು, ಭಾರತ ಬಯಸಿದರೆ ಈ ಯೋಜನೆಯ ಅನುಷ್ಠಾನ ಹೇಗೆಂಬುದರ ಕುರಿತು ತಾವು ಮಾಹಿತಿ ಹಂಚಿಕೊಳ್ಳಲು ಸಿದ್ಧ ಎಂದು ಇಮ್ರಾನ್ ಖಾನ್ ಟ್ವೀಟ್ ಮಾಡಿದ್ದಾರೆ.


ಇಮ್ರಾನ್ ಖಾನ್ ಅವರ ಈ ಸಹಾಯದ ಆಫರ್‌ ಗೆ ವ್ಯಂಗ್ಯವಾಡಿದ  ಭಾರತ ಲಾಕ್‌ಡೌನ್ ಸಮಯದಲ್ಲಿ ಮೋದಿ ಸರ್ಕಾರ ಘೋಷಿಸಿರುವ ವಿಶೇಷ ಆರ್ಥಿಕ ಪ್ಯಾಕೇಜ್, ಪಾಕಿಸ್ತಾನದ ಜಿಡಿಪಿಗಿಂತ ದೊಡ್ಡದು ಎಂದು ತಿರುಗೇಟು ನೀಡಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ವಿದೇಶಾಂಗ ಇಲಾಖೆ ವಕ್ತಾರ ಅನುರಾಗ್ ಶ್ರೀವಾತ್ಸವ್, ಪಾಕಿಸ್ತಾನ ಸರ್ಕಾರ ದೇಶದ ಹೊರಗೆ ಅಕ್ರಮವಾಗಿ ಹಣ ಸಾಗಿಸುವಲ್ಲಿ ನಿಪುಣವಾಗಿದೆಯೇ ಹೊರತು ತನ್ನ ಜನರಿಗೆ ಸಂಕಷ್ಟದಲ್ಲಿ ಸಹಾಯ ಮಾಡಲು ಅಲ್ಲ ಎಂದು ಹೇಳಿದ್ದಾರೆ.



Comments