ಇತಿಹಾಸದ ಪುಟದಲ್ಲಿ ದಾಖಲಾಗಲಿದೆ ಭಾರತದ 55 ವೀರರ ಅಪ್ರತಿಮ ಹೋರಾಟ!

ಲಡಾಖ್ ನ ಗಲ್ವಾನ್ ವ್ಯಾಲಿ ಪ್ರದೇಶದಲ್ಲಿ ಚೀನಿ ಸೈನಿಕರು ಅತಿಕ್ರಮಣ ಮಾಡಿ ಟೆಂಟ್ ನಿರ್ಮಾಣ ಮಾಡಿದ್ದರ ಬಗ್ಗೆ ವಿಚಾರಿಸಲು ಹೋಗಿದ್ದ ವಿಚಾರ ಹಾಗೂ ಆ ಬಳಿಕ ನಡೆದ ಘಟನೆಗಳ ಬಗ್ಗೆ ಹೊಸ ಹೊಸ ಮಾಹಿತಿಗಳು ಲಭ್ಯವಾಗುತ್ತಿದೆ. ನೆನ್ನೆ ಸಾಯಂಕಾಲ  ಚೀನಾದ ಸುಮಾರು 300 ಯೋಧರು ಭಾರತದ ಗಡಿಯ ಒಳಭಾಗದಲ್ಲಿ ಟೆಂಟ್ ಗಳನ್ನು ನಿರ್ಮಿಸಿದ್ದರು.

ಈ ಬಗ್ಗೆ ಪ್ರಶ್ನಿಸಲು ಭಾರತದ ಬಿಹಾರ್ ರೇಜಿಮೆಂಟ್ ನ ಕಮಾಂಡಿಂಗ್ ಆಫೀಸರ್ ನೇತೃತ್ವದಲ್ಲಿ 55 ಯೋಧರು ಈ ಹಿಂದಿನ ಒಪ್ಪಂದದಂತೆ ಬಂದೂಕುಗಳಿಲ್ಲದೆ ತೆರಳಿದ್ದರು. ಅಲ್ಲಿಗೆ ತೆರಳಿ ಮಾತುಕತೆ ನಡೆಸುತ್ತಿದ್ದಂತೆ ಚೀನಿಯರು ಏಕಾಏಕಿ ಭಾರತದ ಯೋಧರ ಮೇಲೆ ಮುಗಿಬಿದ್ದಿದ್ದು ಇದಕ್ಕೆ ನಮ್ಮ ವೀರ ಯೋಧರು ಸಹ ತಕ್ಕ ತಿರುಗೇಟು ನೀಡಿ 43 ರಷ್ಟು ಚೀನಿ ಸೈನಿಕರನ್ನು ಹತ್ಯೆಗೈದು, ಹಲವು ಚೀನಿ ಸೈನಿಕರನ್ನು ಗಂಭೀರ ಗಾಯಗೊಳಿಸಿದ್ದರು.

ಈ ಸಂದರ್ಭ ತಾವಿದ್ದ ಪ್ರದೇಶವನ್ನು ಚೆನ್ನಾಗಿ ಅರ್ಥೈಸಿದ್ದ ಚೀನಿ ಸೈನಿಕರು ಅಲ್ಲಿದ್ದ ಬಂಡೆಗಳ ನಡುವೆ ಅವಿತುಕೊಂಡು ಭಾರತೀಯ ಯೋಧರ ಮೇಲೆ ಕಲ್ಲುಗಳಿಂದ ದಾಳಿ ಮಾಡಲು ಪ್ರಾರಂಭ ಮಾಡಿದ್ದಾರೆ. ಕಡಿದಾದ ಪ್ರದೇಶದಲ್ಲಿ ಚೀನಿಯರ ವಿರುದ್ಧ ತಮ್ಮಲ್ಲಿದ್ದ ದೊಣ್ಣೆ ಹಾಗೂ ಕಲ್ಲುಗಳ ಮೂಲಕವೇ ಹೋರಾಡುತ್ತಿದ್ದ ಭಾರತದ 55 ಸೈನಿಕರಲ್ಲಿ 20 ಸೈನಿಕರು ಅಲ್ಲೇ ಪಕ್ಕದಲ್ಲಿ ಹರಿಯುತ್ತಿದ್ದ ಗಲ್ವಾನ್ ನದಿಗೆ ಬಿದ್ದು ಹುತಾತ್ಮರಾಗಿದ್ದಾರೆ ಎನ್ನುವ ವಿಚಾರ ಇದೀಗ ಬಯಲಾಗಿದೆ.

ತಾವು ಕೇವಲ 55 ಸೈನಿಕರಿದ್ದರೂ ಸಹ 300 ಚೀನಿ ಸೈನಿಕರನ್ನು ಎದುರಿಸಿ ಅವರಿಗೆ ಮುಟ್ಟಿ ನೋಡಿಕೊಳ್ಳುವಂತೆ ಉತ್ತರ ನೀಡಿದ ಭಾರತೀಯ ಸೈನಿಕರ ಅಪ್ರತಿಮ ಸಾಹಸ ಪ್ರಶಂಸೆಗೆ ಪಾತ್ರವಾಗಿದೆ.

ಚೀನಾ ಕಡೆಯಲ್ಲಿಯೂ ಸಹ ಪ್ರಾಣಹಾನಿ ಹಾಗೂ ಗಾಯಗೊಂಡಿರತಕ್ಕಂತಹ ವಿಚಾರವನ್ನು ಚೀನಾದ ಸರಕಾರಿ ಪತ್ರಿಕೆಯ ಸಂಪಾದಕರೊಬ್ಬರು ಸಾಮಾಜಿಕ ಜಾಲತಾಣಗಳಲ್ಲಿ ಒಪ್ಪಿಕೊಂಡಿದ್ದು ಹಾಗೂ ಇದರೊಂದಿಗೆ ಚೀನಾದ ಹಲವಾರು ಹೆಲಿಕಾಪ್ಟರ್ ಗಳಲ್ಲಿ ನೆನ್ನೆಯಿಂದ ಮೃತ ಹಾಗೂ ಗಾಯಾಳು ಸೈನಿಕರನ್ನು ಸಾಗಿಸುತ್ತಿದ್ದ ವಿಚಾರ ಬಯಲಾಗಿದೆ.

Comments