ಚೀನಾಗೆ ಎಚ್ಚರಿಕೆ ನೀಡಿದ ಪ್ರಧಾನಿ ಏನಂದ್ರು ಗೊತ್ತಾ!?

ಭಾರತ ಚೀನಾ ಗಡಿಯಲ್ಲಿ ನಿರ್ಮಾಣವಾಗಿರುವ ಉದ್ವಿಗ್ನ ಪರಿಸ್ಥಿತಿ ಕುರಿತು ಇದೆ ಮೊದಲ ಬಾರಿಗೆ ಪ್ರತಿಕ್ರಿಯೇ ನೀಡಿರುವ ಪ್ರಧಾನಿ ನರೇಂದ್ರ ಮೋದಿಯವರು ಕಮ್ಯುನಿಸ್ಟ್ ರಾಷ್ಟ್ರಕ್ಕೆ ಕಠಿಣ ಸಂದೇಶ ರವಾನೆ ಮಾಡಿದ್ದಾರೆ. ಭಾರತದ ಸಾರ್ವಭೌಮತ್ವ ರಕ್ಷಣೆಗೆ ಯಾವುದೇ ತ್ಯಾಗಕ್ಕೆ ಸಿದ್ದ ಎಂದು ಹೇಳಿದ್ದಾರೆ.

ಈ ಬಗ್ಗೆ ಮಾತನಾಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರು "ದೇಶಕ್ಕಾಗಿ ಹೋರಾಡಿ ತಮ್ಮ ಜೀವವನ್ನು ಅರ್ಪಿಸಿದ ಯೋಧರ ತ್ಯಾಗವನ್ನು ವ್ಯರ್ಥ ಮಾಡಲು ಬಿಡಲಾರೆವು. ನಮ್ಮ ದೇಶದ ಸಾರ್ವಭೌಮತ್ವ ನಮಗೆ ಅತ್ಯಂತ ಮುಖ್ಯವಾಗಿದ್ದು, ಭಾರತಕ್ಕೆ ಶಾಂತಿ ಮುಖ್ಯ ಆದರೆ ಯಾರೇ ಪ್ರಚೋದನೆ ಮಾಡಿದರೂ ಸಹ ಅವರಿಗೆ ತಕ್ಕ ಉತ್ತರ ಕೊಡಲು ನಾವು ಸಮರ್ಥರಾಗಿದ್ದೇವೆ" ಎಂದು ಚೀನಾಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ.

Comments