ಗಡಿಯಲ್ಲಿ ಭಾರತೀಯ ಸೇನೆಗೆ ಫ್ರೀ ಹ್ಯಾಂಡ್

ಲಾಡಾಕ್ ಗಡಿಯಲ್ಲಿ ಕಾಲ್ಕೆರೆದು ಭಾರತದ ಗಡಿ ಪ್ರದೇಶವನ್ನು ಒತ್ತುವರಿ ಮಾಡಲು ಮುಂದಾದ ಆಕ್ರಮಣಕಾರಿ ಚೀನ ಸೇನಾ ಪಡೆಗಳಿಗೆ ದಿಟ್ಟ ತಿರುಗೇಟು ನೀಡಲು ಕೇಂದ್ರ ಸರ್ಕಾರ ಸೇನೆಗೆ ಎಲ್ಲಾ ಸ್ವಾತಂತ್ರ್ಯವನ್ನು ನೀಡಿದೆ. ಈ ಮೂಲಕ ಸೇನೆಗೆ ಚೀನಿ ಸೈನಿಕರ ಅಟ್ಟಹಾಸಕ್ಕೆ ಪೂರ್ಣ ವಿರಾಮವನ್ನು ಹಾಕಲು ಎಲ್ಲಾ ಅವಕಾಶವನ್ನು ಮುಕ್ತವಾಗಿ ಬಳಸಲು ಅವಕಾಶ ನೀಡಲಾಗಿದೆ ಎಂದು ವರದಿಯಾಗಿದೆ .

ಈ ಸಂಬಂಧ ಭಾನುವಾರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಭಾರತ ಚೀನಾ ಗಡಿ ನಿಯಂತ್ರಣ ರೇಖೆಯಲ್ಲಿ ನಡೆಯುತ್ತಿರುವ ಪರಿಸ್ಥಿತಿಯನ್ನು ಅವಲೋಕಿಸಿ ಸೇನಾ ಪಡೆಗಳ ಮುಖ್ಯಸ್ಥರ ಜೊತೆ ಉನ್ನತ ಮಟ್ಟದ ಸಭೆಯಲ್ಲಿ ಈ ಅಧಿಕಾರವನ್ನು ನೀಡಿದ್ದಾರೆ .ಚೀನಾ ಭೂಪ್ರದೇಶದಲ್ಲಿ ಮಾತ್ರವಲ್ಲ ವಾಯು ಪ್ರದೇಶ ಹಾಗೂ  ಸಮುದ್ರ ಮಾರ್ಗಗಳಲ್ಲಿ ದುರ್ವರ್ತನೆ ತೋರಿದರೆ ಕಠಿಣ ರೀತಿಯಲ್ಲಿ ಪ್ರತ್ಯುತ್ತರ ನೀಡುವಂತೆ ರಕ್ಷಣಾ ಸಚಿವರು ಸೇನಾ ಮುಖ್ಯಸ್ಥರುಗಳಿಗೆ ಸೂಚನೆ ನೀಡಿದ್ದಾರೆ .

ಇದಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ರಕ್ಷಣಾ ಪಡೆಗಳಿಗೆ ಸಂಪೂರ್ಣವಾಗಿ ಮುಕ್ತ ನಿರ್ಧಾರ ಕೈಗೊಳ್ಳುವ ಅವಕಾಶ ನೀಡುವುದಾಗಿ ಘೋಷಿಸಿದ್ದರು .ಇನ್ನು ಈ ಸಭೆಯಲ್ಲಿ ಸಶಸ್ತ್ರ ಪಡೆಗಳ ಮುಖ್ಯಸ್ಥರಾದ ಜನರಲ್ ಬಿಪಿನ್ ರಾವತ್ ಭೂಸೇನೆಯ ಮುಖ್ಯಸ್ಥರಾದ ಜನರಲ್ ಎಂಎಂ ನರವಣೆ  ನೌಕಾ  ಪಡೆಯ ಮುಖ್ಯಸ್ಥರಾದ ಪರಂಬೀರ್ ಸಿಂಗ್ ಏರ್ಚೀಫ್ ಮಾರ್ಷಲ್ ಆರ್ಕೆಎಸ್ ಬಡೋರಿಯಾ ಸಭೆಯಲ್ಲಿ ಪಾಲ್ಗೊಂಡಿದ್ದರು .

Comments