ಚೀನಾ ಕಡೆ ತಿರುಗಿದ ಭಾರತದ ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆ

ಕಾಲು ಕೆರೆದು ಭಾರತದ ಜೊತೆಗೆ ಜಗಳಕ್ಕೆ ನಿಂತ ಚೀನಾ ಗಲ್ವಾನ್ ಕಣಿವೆಯಲ್ಲಿ ಭಾರತೀಯ ಯೋಧರ ಮೇಲೆ ಅಟ್ಟಹಾಸ ನಡೆಸಿದ ನಂತರದ  ಬೆಳವಣಿಗೆಯಲ್ಲಿ ಭಾರತ ಚೀನಾ ನಡುವಿನ ಸಂಘರ್ಷ ತಾರಕಕ್ಕೇರಿದೆ .ಚೀನಾಗೆ ಖಡಕ್ ತಿರುಗೇಟು ನೀಡಿರುವ ಭಾರತ ಗಡಿಯಲ್ಲಿ ಸೇನಾ ಜಮಾವಣೆ ಮಾಡುತ್ತಾ ನಿರತವಾಗಿದೆ.

ಚೀನಾ ಕೂಡ ಗಡಿ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೇನೆಯನ್ನು ನಿಯೋಜಿಸಿ ವಾಯುಪ್ರದೇಶದಲ್ಲಿ ವಿಮಾನ ಮತ್ತು ಹೆಲಿಕಾಪ್ಟರ್ಗಳ ಹಾರಾಟ ಹೆಚ್ಚಾಗಿರುವುದರಿಂದ ಇದಕ್ಕೆ ಪ್ರತ್ಯುತ್ತರ ನೀಡಲು ಭಾರತ ತನ್ನ ಅತ್ಯಾಧುನಿಕ ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆಯನ್ನು ನಿಯೋಜಿಸಿದೆ .

ಶತ್ರುವಿನ ಕುತಂತ್ರವನ್ನು ಕ್ಷಣಾರ್ಧದಲ್ಲಿ  ನಾಶಪಡಿಸಬಲ್ಲ  ಕ್ಷಿಪಣಿಯನ್ನು ಗಡಿಯಲ್ಲಿ ಭಾರತ ನಿಯೋಜಿಸಿದೆ. ಅಲ್ಲದೆ ಭಾರತ ಯುದ್ಧ ವಿಮಾನಗಳು ಮತ್ತು ಹೆಲಿಕಾಪ್ಟರ್ ಗಳು ಸಹ ಗಡಿಯಲ್ಲಿ ಗಸ್ತು ತಿರುಗುತ್ತಿವೆ.  ಈ ಬೆಳವಣಿಗೆ  ಚೀನಾವನ್ನು ಗಡಗಡ ನಡುಗುವಂತೆ ಮಾಡಿದೆ.
 .ಗಲ್ವಾನ್ ಕಣಿವೆಯಲ್ಲಿ ಜೂ 15ರಂದು ಚೀನಾ ಸೈನಿಕರು ಮತ್ತು ಭಾರತೀಯ ಯೋಧರ ನಡುವೆ ಹೊಡೆದಾಟ, ಕಲ್ಲು ತೂರಾಟಗಳು ನಡೆದಿದ್ದು ಇದರಲ್ಲಿ 20 ಮಂದಿ ಭಾರತೀಯ ಯೋಧರು ಹುತಾತ್ಮರಾಗಿದ್ದರು. 

Comments