ನಾವು ಹಿಂದೆ ಸರಿಯುವುದಿಲ್ಲ ದೇಶದ ಸಾರ್ವಭೌಮತ್ವವನ್ನು ರಕ್ಷಿಸುತ್ತೇವೆ :ಭಾರತೀಯ ಸೇನೆ

ಭಾರತ-ಚೀನಾ ನಡುವೆ ಗಡಿ ಸಂಘರ್ಷ ತಾರಕಕ್ಕೇರಿದೆ.  ಉಭಯ ಸೇನೆಗಳ ನಡುವೆ ನಡೆದ ಸಂಘರ್ಷದ ವೇಳೆ ಭಾರತ ಸೇನೆಯ 20 ಯೋಧರು ಹುತಾತ್ಮರಾದ ಮಾಹಿತಿ ಹೊರಬಿದ್ದದೆ. ಅಷ್ಟೇ ಅಲ್ಲ, ಚೀನಾ ಸೇನೆಯ 43 ಯೋಧರು ಸಾವನ್ನಪ್ಪಿರುವ, ಗಾಯಗೊಂಡಿರುವ ವರದಿಗಳು ಹೊರಬೀಳುತ್ತಿವೆ.ಈ ನಡುವೆ ಹವಾಮಾನ ವೈಪರಿತ್ಯದ ನಡುವೆಯೂ ಹಿಂದೆ ಸರಿಯೋದಿಲ್ಲ ಎಂದು ಭಾರತೀಯ ಸೇನೆ ಸ್ಪಷ್ಟನೆ ನೀಡಿದೆ .

ಲಡಾಖ್‌ನಲ್ಲಿ ಇದೀಗ ಕೆಲವೆಡೆ ಶೂನ್ಯಕ್ಕಿಂತಾ ಕಡಿಮೆ ತಾಪಮಾನವಿದೆ. ಸಮುದ್ರ ಮಟ್ಟಕ್ಕಿಂತಾ ತುಂಬಾ ಎತ್ತರದ ಈ ಸ್ಥಳದಲ್ಲಿ ಗಾಯಾಳುಗಳ ಸ್ಥಿತಿ ಗಂಭೀರವಾಗುವ ಸಾಧ್ಯತೆಗಳಿವೆ. 20 ಭಾರತೀಯ ಯೋಧರು ಹುತಾತ್ಮರಾದರೂ ಕೂಡಾ ದೇಶದ ಗಡಿಯನ್ನು ರಕ್ಷಿಸುವ, ದೇಶದ ಸಾರ್ವಭೌಮತ್ವವನ್ನು ರಕ್ಷಿಸುವ ಕಾಯಕದಿಂದ ಹಿಂದೆ ಸರಿಯೋದಿಲ್ಲ ಎಂದು ಭಾರತೀಯ ಸೇನೆ ಸ್ಪಷ್ಟಪಡಿಸಿದೆ.

Comments