ಮಂಗಳೂರು ನಸುಕಿನ ಜಾವ ಅಕ್ರಮ ಗೋ ಸಾಗಣೆ ವಿರುದ್ಧ ಕಾರ್ಯಾಚರಣೆಗಿಳಿದ ಬಜರಂಗಿಗಳು

ಮಂಗಳೂರಿನಲ್ಲಿ ಅಕ್ರಮ ಗೋ ಸಾಗಾಟದ ವಿರುದ್ಧ ಭಜರಂಗಿ ಕಾರ್ಯಕರ್ತರು ಖುದ್ದಾಗಿ ಫೀಲ್ಡ್ಗೆ ಇಳಿದಿದ್ದಾರೆ .ಇಂದು ನಸುಕಿನ ಜಾವ ಮಂಗಳೂರು ನಗರಕ್ಕೆ ಅಕ್ರಮ ಗೋಸಾಗಾಟ ನಡೆಯುತ್ತಿದ್ದ ಮಾಹಿತಿಯನ್ನು ಪಡೆದ ಬಜರಂಗದಳ ಕಾರ್ಯಕರ್ತರು ಕೊಟ್ಟಾರ ಚೌಕಿ ಬಳಿ ಮಿನಿ ಟೆಂಪೋವನ್ನು ತಡೆದು ನಾಲ್ಕು ಕೋಣಗಳನ್ನು ರಕ್ಷಣೆ ಮಾಡಿ ಓರ್ವ ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ ಪ್ರಕರಣ ಘಟನೆಗೆ ಸಂಬಂಧಿಸಿ ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಳೆದ ಕೆಲವು ವರ್ಷಗಳಿಂದ. ದಾಳಿ ನಡೆಸದೆ ಸೈಲೆಂಟ್ ಇದ್ದ ಸಂಘಟನೆ ಇದೀಗ ಮತ್ತೆ ಚುರುಕಾಗಿ ಮತ್ತೆ ಹಿಂದಿನಂತೆ ಫೀಲ್ಡ್ ಗಿಳಿದು ಗೋಸಾಗಾಟ ತಡೆಯಲು ಮುಂದಾಗಿದ್ದು ಸರಕಾರ ಮತ್ತು ಪೋಲೀಸ್ ಇಲಾಖೆಗೆ ಸವಾಲಾಗಿದೆ. ಪೋಲೀಸ್ ಇಲಾಖೆಯೇ ಗಂಬೀರವಾಗಿ ಇಂತಹ ಪ್ರಕರಣ ಗಮನಿಸಿ ಅಮಾನುಷ ವಾಗಿ ಕೊಂಡೊಯ್ಯುವ ದನಗಳನ್ನು ಹಿಡಿಯಬೇಕು ಮತ್ತು ಇಂತಹ ಅಕ್ರಮ ಚಟುವಟಿಕೆಗಳಿಗೆ ಬ್ರೇಕ್ ಹಾಕಬೇಕು ಹಾಗೂ ಸರಕಾರ ಗೋಹತ್ಯಾ ಕಾನೂನು ಜಾರಿಗೆ ತರಬೇಕೆಂಬ ಆಗ್ರಹ ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದೆ.

Comments