ಪಾಕಿಸ್ತಾನ ತನ್ನ ನರಿಬುದ್ಧಿಯನ್ನು ಮುಂದುವರಿಸಿದೆ.ಈ ಬಾರಿ ಪಾಕಿಸ್ತಾನದಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಇಬ್ಬರು ಸಿಬ್ಬಂದಿಗಳನ್ನು ಅಪಹರಿಸಿದ ಪಾಕಿಸ್ತಾನ ಮೊದಲು ಅಪಹರಣದ ಕುರಿತು ತನಗೇನೂ ಗೊತ್ತೇ ಇಲ್ಲ ಎಂಬಂತೆ ನಾಟಕ ಮಾಡಿತ್ತು .ಇನ್ನು ಈ ಬಗ್ಗೆ ವಿಷಯ ತಿಳಿಯುತ್ತಿದ್ದಂತೆ ಭಾರತದ ವಿದೇಶಾಂಗ ಸಚಿವಾಲಯ ಅಪಹರಣ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ಪಾಕಿಸ್ತಾನವನ್ನು ಪ್ರಶ್ನಿಸಿತು.
ಮೊದಲು ಪಾಕ್ ಸರಕಾರ ಪರಿಶೀಲಿಸುವ ಬಗ್ಗೆ ಮಾತನಾಡಿ ಸಮಯವನ್ನು ಮುಂದೂಡಿತು .ನಂತರ ಪಟ್ಟು ಬಿಡದ ಭಾರತ ಒತ್ತಡವನ್ನು ಹೆಚ್ಚಿಸಿದೆ. ಮರ್ಯಾದೆಯಿಂದ ಭಾರತೀಯ ರಾಯಭಾರಿ ಅಧಿಕಾರಿಗಳನ್ನು ಸರಕಾರಿ ಕಾರಿನಲ್ಲಿ ತಮ್ಮ ರಾಯಭಾರಿ ಕಚೇರಿಗೆ ಕಳುಹಿಸಿಕೊಡಿ ಇಲ್ಲವಾದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಭಾರತ ವಿದೇಶಾಂಗ ಸಚಿವಾಲಯ ಪಾಕ್ ರಾಯಭಾರಿ ಅಧಿಕಾರಿಗಳನ್ನು ಎಚ್ಚರಿಕೆ ನೀಡಿತ್ತು .ಎಚ್ಚರಿಕೆ ನೀಡಿದ ಬೆನ್ನಲ್ಲೇ ಪಾಕಿಸ್ತಾನ ಭಾರತದ ಇಬ್ಬರು ರಾಯಭಾರಿ ಕಚೇರಿ ಅಧಿಕಾರಿಗಳನ್ನು ಬಿಡುಗಡೆ ಮಾಡಿದೆ .ಭಾರತೀಯ ರಾಯಭಾರಿ ಅಧಿಕಾರಿಗಳು ಅಪಘಾತ ಪ್ರಕರಣದಲ್ಲಿ ಭಾಗಿಯಾದ್ದರಿಂದ ಬಂಧಿಸಿರುವುದಾಗಿ ಸಬೂಬು ನೀಡಿ ಪಾಕಿಸ್ತಾನ ಇದೀಗ ನುಣುಚಿಕೊಂಡಿದೆ .

Comments
Post a Comment