ಕಾಶ್ಮೀರದಲ್ಲಿರುವ ಹಿಂದೂಗಳಿಗೆ ಶಸ್ತ್ರಾಸ್ತ್ರ ತರಬೇತಿ ನೀಡಿ ಎಂದು ಆಗ್ರಹಿಸಿದ ಶೇಷ್ ಪೌಲ್ ವೇದ್

ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ಕಾಶ್ಮೀರಿ ಪಂಡಿತ ಸರಪಂಚ್ ಅಜಯ್ ಪಂಡಿತ್ ಭಾರತಿ ಅವರನ್ನು ಉಗ್ರರು ಹತ್ಯೆಗೈದ ಕುರಿತು ಆಕ್ರೋಶ ವ್ಯಕ್ತಪಡಿಸಿರುವ ನಿವೃತ್ತ ಡಿಜಿಪಿ ಶೇಷ್ ಪೌಲ್ ವೇದ್ ಅವರು ಕಾಶ್ಮೀರದಲ್ಲಿರುವ ಅಲ್ಪಸಂಖ್ಯಾತ ಹಿಂದೂಗಳಿಗೆ ಮತ್ತು  ಸಮುದಾಯದ ದುರ್ಬಲ ವ್ಯಕ್ತಿಗಳ ಕೈಗೆ ಶಸ್ತ್ರಾಸ್ತ್ರಗಳನ್ನು ಪೂರೈಸಿ ಅವರಿಗೆ ಸೂಕ್ತವಾದ ಶಸ್ತ್ರಾಸ್ತ್ರ ತರಬೇತಿ ನೀಡಬೇಕು. ಈ ಮೂಲಕ ಅವರು ಉಗ್ರರಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಬೇಕೆಂದು ಅಚ್ಚರಿಯ ಸಲಹೆಯನ್ನು ಶೇಷ್ ಪೌಲ್ ವೇದ್ ನೀಡಿದ್ದಾರೆ .

ಕಾಶ್ಮೀರದ ಖಾಸಗಿ ಸುದ್ದಿ ವಾಹಿನಿಗೆ ಸಂದರ್ಶನ ನೀಡುವ ವೇಳೆ ಮಾತನಾಡಿದ ಅವರು ಕಾಶ್ಮೀರ ಹಿಂದೂಗಳಲ್ಲಿ ಸುರಕ್ಷತೆಯ ಭಾವನೆಯನ್ನು ಬರುವಂತೆ ಸೂಕ್ತ ಕ್ರಮ ಕೈಗೊಳ್ಳಬೇಕಿದೆ. ಆ ನಿಟ್ಟಿನಲ್ಲಿ ಕಾಶ್ಮೀರದ ಹಿಂದೂಗಳಿಗೆ ಶಸ್ತ್ರಾಸ್ತ್ರ ತರಬೇತಿ ನೀಡುವ ವಿಸ್ತೃತ ಯೋಜನೆಯನ್ನು ಜಾರಿಗೊಳಿಸುವುದು ಅತ್ಯಗತ್ಯ ಎಂದಿದ್ದಾರೆ.ಕಾಶ್ಮೀರಿ ಪಂಡಿತ ಸರಪಂಚ್ ಹತ್ಯೆಗೈದ ಬೆನ್ನಲ್ಲೇ ಉಗ್ರರ ವಿರುದ್ಧ ಕಣಿವೆಯಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ

Comments