ಹಲವಾರು ವರ್ಷಗಲಿಂಡ ಕ್ಯಾನ್ಸರ್ ಸೇರಿ ಹಲವು ಕಾಯಿಲೆಗೆ ಔಷಧಿ ನೀಡಿ ದೇಶ ವಿದೇಶದಲ್ಲಿ ಹೆಸರುವಾಸಿಯಾಗಿದ್ದ ನಾಟಿವೈದ್ಯ ನರಸಿಪುರ ನಾರಾಯಣಮೂರ್ತಿ 24- ಜೂನ್ -2020 ಬುಧವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಶಿವಮೊಗ್ಗದ ಶಿಕಾರಿಪುರ ತಾಲೂಕು ಆನಂದಪುರ ಸಮೀಪ ನರಸಿಪುರದಲ್ಲಿ ವಾಸವಿದ್ದ ನಾರಾಯಣಮೂರ್ತಿ ಅವರಿಗೆ 81 ವರ್ಷ ವಯಸ್ಸಾಗಿತ್ತು.ಮೃತರಿಗೆ ಪತ್ನಿ, ನಾಲ್ವರು ಹೆಣ್ಣುಮಕ್ಕಳು ಹಾಗೂ ಓರ್ವ ಪುತ್ರರಿದ್ದಾರೆ.
ಇವರ ಬಳಿ ಕ್ಯಾನ್ಸರ್ ಔಷಧಿಗಾಗಿ ಭಾರತದ ಹಲವು ರಾಜ್ಯಗಳಲ್ಲದೆ ಆಸ್ಟ್ರೇಲಿಯಾ, ಶ್ರೀಲಂಕಾಗಳಿಂದ ಜನ ಆಗಮಿಸುತ್ತಿದ್ದರು. ದೇಶದ ನಾನಾ ರಾಜಕಾರಣಿಗಳು, ಉದ್ಯಮಿಗಳು ಇವರ ಬಳಿ ಔಷಧಕ್ಕಾಗಿ ಬಂದಿದ್ದಾರೆ. ದೇಶ, ವಿದೇಶದ ನಾನಾ ಪ್ರಸಿದ್ದ ಪತ್ರಿಕೆಗಳಲ್ಲಿ ಇವರ ಸಂದರ್ಶನ ಪ್ರಕಟವಾಗಿತ್ತು. ನಾರಾಯಣ ಮೂರ್ತಿಯವರು ನಮ್ಮ ಹಳೆಯ ಆಯುರ್ವೇದಿಕ್ ಔಷಧೋಪಚಾರದಿಂದ ದಿನನಿತ್ಯ ಸಾವಿರಾರು ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದರು. . ಪ್ರತೀ ಗುರುವಾರ ಮತ್ತು ಭಾನುವಾರ ದೇಶದ ವಿವಿಧ ಮೂಲೆಯಿಂದ ಬರುವ ರೋಗಿಗಳಿಗೆ ಚಿಕಿತ್ಸೆ ಕೊಡುತ್ತಿದ್ದರು.

Comments
Post a Comment