ಬೇಹುಗಾರಿಕೆಗೆ ಹೊಂಚು ಹಾಕಿದ ಪಾಕಿಸ್ತಾನದ ಇಬ್ಬರು ಹೈ ಕಮೀಷನ್ ಅಧಿಕಾರಿಗಳಿಗೆ 24 ಗಂಟೆಗಳಲ್ಲಿ ಭಾರತ ಬಿಟ್ಟು ತೊಲಗುವಂತೆ ಆದೇಶ
ನವದೆಹಲಿ: ಭಾರತದಲ್ಲಿರುವ ಪಾಕಿಸ್ತಾನ ರಾಯಭಾರ ಕಚೇರಿಯಲ್ಲಿ ಕರ್ತವ್ಯನಿರತ ಇಬ್ಬರು ಪಾಕ್ ರಾಜತಾಂತ್ರಿಕ ಅಧಿಕಾರಿಗಳನ್ನು ಬೇಹುಗಾರಿಕೆ ಆರೋಪದ ಮೇಲೆ ಬಂಧಿಸಲಾಗಿದೆ. ಇನ್ನು ಬೇಹುಗಾರಿಕೆ ನಡೆಸಿದ ಆರೋಪದ ಮೇಲೆ ಪಾಕಿಸ್ತಾನದ ಇಬ್ಬರು ಹೈ ಕಮೀಷನ್ ಅಧಿಕಾರಿಗಳಿಗೆ 24 ಗಂಟೆಗಳಲ್ಲಿ ಭಾರತ ಬಿಟ್ಟು ತೊಲಗುವಂತೆ ವಿದೇಶಾಂಗ ಸಚಿವಾಲಯ ಸೂಚಿಸಿದೆ.ಭಾರತದಲ್ಲಿ ಪಾಕ್ ಹೈ ಕಮೀಷನ್ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಅಧಿಕಾರಿಗಳು ಬೇಹುಗಾರಿಕೆ ನಡೆಸುತ್ತಿದ್ದ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ದೇಶ ತೊರೆಯುವಂತೆ ಸೂಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಾಕ್ ಹೈ ಕಮೀಷನ್ ಅಧಿಕಾರಿಗಳಾದ ಅಬಿದ್ ಹುಸೇನ್ ಮತ್ತು ತಾಹೀರ್ ಹುಸೇನ್ ಎಂಬವರು ಬೇಹುಗಾರಿಕೆ ನಡೆಸುತ್ತಿದ್ದಾಗಲೇ ಭದ್ರತಾಪಡೆ ಸಿಬ್ಬಂದಿ ಸಾಕ್ಷಿ ಸಮೇತ ಹಿಡಿದಿದ್ದರು. ಇದೇ ವೇಳೆ ಇಬ್ಬರು ಅಧಿಕಾರಿಗಳು ನಕಲಿ ಭಾರತೀಯ ಗುರುತು ಚೀಟಿಗಳನ್ನು ಎಲ್ಲೆಡೆ ಬಳಸಿದ್ದಾರೆ ಎಂದು ತಿಳಿದುಬಂದಿದೆ

The Acting High Commissioner of India to Pakistan summoned by Pakistan's Ministry of Foreign Affairs, after India expelled two Pakistan High Commission officials yesterday.
— ANI (@ANI) June 1, 2020
Comments
Post a Comment