ಇಡೀ ವಿಶ್ವಕ್ಕೆ ಕೊರೊನಾ ಲಸಿಕೆ ರವಾನಿಸುವ ಶಕ್ತಿ, ಭಾರತಕ್ಕಿದೆ: ಬಿಲ್ ಗೇಟ್ಸ್

ಕೊರೋನಾ ವೈರಸ್‌ಗೆ ಲಸಿಕೆ ಅಭಿವೃದ್ಧಿಪಡಿಸಲು ವಿಶ್ವದ ಹಲವು ದೇಶಗಳು ಪ್ರಸ್ತುತ ಕಾರ್ಯೋನ್ಮುಖವಾಗಿವೆ. ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಈಗಾಗಲೇ ಲಸಿಕೆ ಮಾನವರ ಮೇಲೆ ಪ್ರಯೋಗಗಳು ನಡೆಯುತ್ತಿವೆ. ಈ ನಿಟ್ಟಿನಲ್ಲಿ ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್ ಆಸಕ್ತಿದಾಯಕ ಹೇಳಿಕೆ ನೀಡಿದ್ದಾರೆ.

ಭಾರತ ದೇಶದ ಔಷಧಿ ವಲಯ ಗಗನದೆತ್ತರದಲ್ಲಿದೆ. ತಮ್ಮ ದೇಶಕ್ಕೆ ಮಾತ್ರವಲ್ಲ ಇಡೀ ಜಗತ್ತಿಗೆ ಸಾಕಾಗುವಷ್ಟು ಪ್ರಮಾಣದ ಲಸಿಕೆ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ ಎಂದು ಅವರು ಹೇಳಿದ್ದಾರೆ. ಭಾರತದಲ್ಲಿ ಲಸಿಕೆ ಅಭಿವೃದ್ಧಿಪಡಿಸಲು ಈಗಾಗಲೇ ಪ್ರಮುಖ ಸಂಶೋಧನೆಗಳು ನಡೆದಿವೆ. ಇತರ ರೋಗಗಳಿಗೆ ಉಪಯೋಗಿಸುವ ಹಲವು ಸಮ್ಮಿಶ್ರಣದೊಂದಿಗೆ ಕೊರೊನಾಗೆ ಲಸಿಕೆ ರೂಪಿಸಲು ಭಾರತೀಯ ಔಷಧಿ ತಯಾರಿಕಾ ಕಂಪನಿಗಳು ಶ್ರಮಿಸುತ್ತಿವೆ ಎಂದು ಹೇಳಿದ್ದಾರೆ.

Comments