ಸದಾ ಇತರರ ಭೂಪ್ರದೇಶವನ್ನು ಕಬಳಿಸಿ ಅಟ್ಟಹಾಸ ಮೆರೆಯುವ ಚೀನಾ ಈ ಬಾರಿ ಲಡಾಖ್ ವಲಯದ ವಾಸ್ತವ ಗಡಿ ನಿಯಂತ್ರಣ ರೇಖೆಯ ಸಂಘರ್ಷ ತಾಣ ಗಲ್ವಾನ್ ಕಣಿವೆಯಲ್ಲಿ ಬೀಡು ಬಿಟ್ಟಿದೆ.ಪ್ರಮುಖವಾಗಿ ಪ್ರಕ್ರತಿ ನಿಯಮಗಳಿಗೆ ಸವಾಲು ಹಾಕುತ್ತ ನದಿ ನೀರು ಹರಿಯುವಿಕೆಗೆ ಕಡಿವಾಣ ಹಾಕಿ ಅ ಪ್ರದೇಶದಲ್ಲಿ ತಮ್ಮ ಸೇನಾ ನೆಲೆಗಳನ್ನು ಸ್ಥಾಪಿಸುತಿದೆ.ಈ ಪೈಕಿ ಗಲ್ವಾನ್ ಕಣಿವೆಯಲ್ಲಿಕೂಡ ತನ್ನ ಅಟ್ಟಹಾಸ ಮೆರೆದಿದ್ದ ಪರಿಣಾಮ ಪ್ರಕೃತಿಯೇ ಚೀನಾ ವಿರುದ್ಧ ಸೆಟೆದು ನಿಂತಿದೆ.
ಪರಿಣಾಮ ಗಲ್ವಾನ್ ಕಣಿವೆಯಲ್ಲಿ ಬೀಡು ಬಿಟ್ಟಿರುವ ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿಗೆ ಈಗ ಮೈ ಕೊರೆಯುವಂತಹ ಥಂಡಿ ಹವಾಮಾನದ ಸವಾಲು ಎದುರಾಗಿದೆ. ಕಣಿವೆ ಭಾಗದ ವಾತಾವರಣದಲ್ಲಿ ತಾಪಮಾನ ದಿಢೀರ್ ಏರಿಕೆಯಾಗಿದ್ದು ಸುತ್ತಲಿನ ಹಿಮ ಶಿಖರಗಳು ಕರಗಿ ನೀರಾಗಿ ಹರಿಯತೊಡಗಿವೆ.
ನದಿಗೆ ಹಿಮ ಬಂಡೆಗಳೇ ಹರಿದು ಬರುತ್ತಿದ್ದು, ನೀರಿನ ಹರಿವಿನ ಮಟ್ಟ ಗರಿಷ್ಠ ಪ್ರಮಾಣದಲ್ಲಿ ಹೆಚ್ಚಳಗೊಂಡಿದೆ. ಇದರ ಪರಿಣಾಮ ಇಡೀ ಪ್ರದೇಶದಲ್ಲಿ ರಕ್ತ ಹೆಪ್ಪುಗಟ್ಟಿಸುವ ಚಳಿಯ ವಾತಾವರಣವಿದೆ. ಸಂಘರ್ಷ ನಡೆದ ತಾಣದಿಂದ 5 ಕಿ.ಮೀ ದೂರದಲ್ಲಿ ಠಿಕಾಣಿ ಹೂಡಿರುವ ಚೀನಿ ಸೈನಿಕರು ಈಗ ಚಳಿ ತಾಳದೇ ತಲ್ಲಣಿಸುತ್ತಿದ್ದಾರೆ.ನದಿ ನೀರಿನ ಪ್ರವಾಹ ಚೀನಿ ಸೈನಿಕರ ಟೆಂಟ್‌ಗಳವರೆಗೆ ಚಾಚಿರುವುದು ಸ್ಯಾಟಲೈಟ್ ಚಿತ್ರಗಳಿಂದ ತಿಳಿದು ಬಂದಿದೆ. ಪರಿಸ್ಥಿತಿ ಹೀಗೇ ಮುಂದುವರಿದರೆ ಶತ್ರು ಸೈನಿಕರು ಅಲ್ಲಿಂದ ಜಾಗ ಖಾಲಿ ಮಾಡುವುದು ಅನಿವಾರ್ಯವಾಗುತ್ತದೆ.ಇಲ್ಲವಾದರೆ ಚೀನಿ ಸೈನಿಕರು ಮತ್ತು ಅವರ ಯುದ್ಧ ಸಾಮಗ್ರಿಗಳು ನೀರಿನಲ್ಲಿ ಕೊಚ್ಚಿ ಹೋಗಲಿದೆ ಎಂದು ಭಾರತೀಯ ಸೇನಾಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

Comments
Post a Comment