ಚೀನಿ ವಸ್ತುಗಳ ಮೇಲೆ ನಿಷೇಧ ಹೇರಲು ಅಮೇರಿಕಾದಲ್ಲಿ ಪ್ರತಿಭಟನೆ

ಭಾರತ- ಚೀನಾ ನಡುವಿನ  ಸಂಘರ್ಷದ ಬೆನ್ನಲ್ಲಿ ಚೀನಾ ವಿರುದ್ಧ ಸಿಡಿದೆದ್ದಿರೋ ಭಾರತೀಯರು ಚೀನಾಗೆ ತಕ್ಕ ಪಾಠ ಕಲಿಸಬೇಕೆಂದು ಸ್ವಯಂ ಪ್ರೇರಿತವಾಗಿ ಚೀನೀ ವಸ್ತುಗಳ ಬಹಿಷ್ಕಾರ ಹಾಕಿದ್ದಾರೆ .ಇನ್ನು  ಕೇಂದ್ರ ಸರ್ಕಾರ ಕೂಡ  ಚೀನಾದ 59 ಆಪ್‌ಗಳನ್ನು ಭಾರತದಲ್ಲಿ ಬ್ಯಾನ್ ಮಾಡುವ ಮೂಲಕ ಚೀನಾಗೆ ಸ್ಪಷ್ಟ ಸಂದೇಶ ರವಾನಿಸಿತ್ತು. ಚೀನಾ ಕೂಡ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿತ್ತು. ಇದೀಗ ಭಾರತದಲ್ಲಿ ಕೇಳಿ ಬರುತ್ತಿದ್ದ ಚೀನಾ ವಿರೋಧಿ ಕೂಗು ಅಮೆರಿಕಾದಲ್ಲೂ ಪ್ರತಿಧ್ವನಿಸಿದೆ. ಅಮೆರಿಕಾದಲ್ಲಿ ನೆಲೆಸಿರುವ ವಿವಿಧ ದೇಶಗಳ ನಾಗರಿಕರು ಚೀನಾದ ವಸ್ತುಗಳನ್ನು ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದಾರೆ.

ಚೀನಾದ ವಸ್ತುಗಳನ್ನು ನಿಷೇಧಿಸುವ ಮೂಲಕ ವ್ಯಾಪಾರ ಸಂಬಂಧವನ್ನು ಕೊನೆಗೊಳಿಸಬೇಕು ಎಂದಿರುವ ಪ್ರತಿಭಟನಾಕಾರರು, ತೈವಾನ್‌ಗೆ ಬೆಂಬಲ ನೀಡುವುದು ಮಾತ್ರವಲ್ಲದೇ ಟಿಬೆಟ್‌ನ ಸ್ವಾತಂತ್ರ್ಯ ಹೋರಾಟದ ಪರವಾಗಿ ನಿಲ್ಲಬೇಕು ಎಂದು ಆಗ್ರಹಿಸಿದ್ದಾರೆ.


Comments