ವಾಸ್ತವ್ ಗಡಿಯಲ್ಲಿ ಬಾಲ ಬಿಚ್ಚಿದ ಚೀನಾಗೆ ಭಾರತೀಯ ಸೇನೆ ನೀಡುತ್ತಿರುವ ತಿರುಗೇಟಿಗೆ ಚೀನಾ ಕಂಗಾಲಾಗಿದೆ.ಸಶಕ್ತ ಭಾರತೀಯ ಸೇನೆ ವಿರುದ್ಧ ಚೀನ ಯುದ್ಧಕ್ಕೆ ನಿಂತರೆ ಲಡಾಖ್ ಗಡಿಯುದ್ದಕ್ಕೂ ತೀವ್ರ ಮುಖಭಂಗ ಅನುಭವಿಸಲಿದೆ.ಚೀನಾ ಬಳಿ ಬೃಹತ್ ಸೈನ್ಯ ಜತೆಗಿದ್ದರೂ ಚೀನಕ್ಕೆ ಹತ್ತಾರು ಬಿಕ್ಕಟ್ಟುಗಳ ತಲೆನೋವಿದೆ. ರಷ್ಯಾದ ಗಡಿಗಳಲ್ಲಿನ ನಿಯೋಜನೆಗೆ ಚೀನ ಬಹುಪಾಲು ಸೈನ್ಯವನ್ನು ಬಳಸಿದೆ. ಟಿಬೆಟ್‌ನ ಆಂತರಿಕ ದಂಗೆ ಎದುರಿಸಲು ಈಗಿರುವ ಸೈನ್ಯವೂ ಕ್ಸಿ ಜಿನ್‌ಪಿಂಗ್ ಸರ್ಕಾರಕ್ಕೆ ಸಾಲದಾಗಿದೆ ಎಂದು ಭದ್ರತಾ ತಜ್ಞರು ವಿಶ್ಲೇಷಿಸಿದ್ದಾರೆ.
ರಕ್ಷಣಾ ವಿಶ್ಲೇಷಣಾ ಸಂಸ್ಥೆ ಬಿಸಿಎಸ್‌ಐಎ ಪ್ರಕಾರ, ಚೀನದ ಭೂಸೇನೆಯ 2-2.30 ಲಕ್ಷ ಸೈನಿಕರು ವೆಸ್ಟರ್ನ್ ಥಿಯೇಟರ್ ಕಮಾಂಡ್ ವ್ಯಾಪ್ತಿಯ 7 ಪ್ರಾಂತ್ಯಗಳು, ಟಿಬೆಟ್ ಹಾಗೂ ಕ್ಸಿನ್‌ಜಿಯಾಂಗ್ ಮಿಲಿಟರಿ ಜಿಲ್ಲೆಗಳಲ್ಲಿ ಹರಿದು ಹಂಚಿಹೋಗಿದ್ದಾರೆ.
ಹೊಸ ಜಂಟಿ ವೆಸ್ಟರ್ನ್ ಥಿಯೇಟರ್ ಕಮಾಂಡ್ ಪಡೆ ರಚಿಸಿದ್ದರೂ ಅದು ಪಶ್ಚಿಮ ಚೀನದ ಒಳಭಾಗ ದಲ್ಲಿದೆ. ಒಮ್ಮೆ ಅಲ್ಲಿಂದ ಸೇನೆ ಎದ್ದು ಬಂದರೆ, ಸ್ಥಳೀಯರ ದಂಗೆ ಚೀನದ ಮಾನ ಕಳಚಲಿದೆ. ಇವೆಲ್ಲದರ ಕಾರಣಕ್ಕಾಗಿ ಭಾರತದ ಗಡಿಪ್ರದೇಶಗಳ ಸಮೀಪ ವಿರುವ ಟಿಬೆಟ್‌ನಲ್ಲಿ ತೀರಾ ಹರಸಾಹಸಪಟ್ಟು 40 ಸಾವಿರ ಸೈನಿಕರನ್ನು ಗಡಿಗುಂಟ ನಿಲ್ಲಿಸಲು ಚೀನಕ್ಕೆ ಸಾಧ್ಯವಾಗಿದೆ.
ಇನ್ನು ಲಡಾಖ್‌ನಲ್ಲಿ ಭಾರತ ಶಾಶ್ವತವಾಗಿ ಪಡೆಗಳನ್ನು ನಿಲ್ಲಿಸಿದ್ದರೆ, ಚೀನ ತನ್ನ ಯಾವುದ್ಯಾವುದೋ ಮೂಲೆಯಿಂದ ಸೈನಿಕರನ್ನು ತಂದು ಪ್ಯಾಂಗಾಂಗ್ ತಟದಲ್ಲಿ ನಿಲ್ಲಿಸುತ್ತಿದೆ. ಲಡಾಖ್ ವಾತಾವರಣಕ್ಕೆ ಅವರು ಒಗ್ಗಿಕೊಳ್ಳಲು, ಹಿಮದ ನೆಲದ ಗುಟ್ಟು ಅರಿಯಲೂ ಒದ್ದಾಡುತ್ತಿದ್ದಾರೆ. ಲಡಾಖ್‌ನಲ್ಲಿ ಯುದ್ಧ ಟ್ಯಾಂಕರ್‌ಗಳನ್ನು ನಿಯೋಜಿಸುವುದಕ್ಕೆ ಭಾರತ 15 ದಿನಗಳನ್ನು ತೆಗೆದುಕೊಂಡರೆ, ಚೀನ 1 ವರ್ಷದಿಂದ ಈ ಕೆಲಸ ನಡೆಸುತ್ತಿದೆ.

Comments
Post a Comment