ಪದೇ ಪದೇ ಜನರಲ್ಲಿ ಆತಂಕ ಹುಟ್ಟಿಸುವ ಮಾಧ್ಯಮಗಳ ಮೇಲೆ ಲಾಕ್ ಡೌನ್ ಹೇರಬೇಕು : ನಿಮ್ಹಾನ್ಸ್ ತಜ್ಞರು

ಕೊರೋನಾ ಬಗ್ಗೆ ಅರಿವು-ಜಾಗೃತಿ ಹಾಗೂ ಜನರಿ ಮಾಹಿತಿ ನೀಡುವಲ್ಲಿ ಮಾಧ್ಯಮಗಳು ಪ್ರಮುಖ ಪಾತ್ರ ವಹಿಸುತಿದೆ  ಆದರೆ ಬಿತ್ತಿರಿಸುವ ಸುದ್ದಿಯಲ್ಲಿ ಸಮತೋಲನ ಅಗತ್ಯ ಪದೇ ಪದೇ ಜನರಲ್ಲಿ ಆತಂಕ ಹುಟ್ಟಿಸುವ ಮಾಧ್ಯಮಗಳ ಮೇಲೆ  ಲಾಕ್ ಡೌನ್
 ಹೇರಬೇಕು   ಎಂದು ನಿಮ್ಹಾನ್ಸ್ ಮನಶಾಸ್ತ್ರಜ್ಞ ಡಾ.ಕೆಎಸ್ ಚತುರ್ವೇದಿ ಹೇಳಿದ್ದಾರೆ.

ಕಳೆದ ಮೂರುವರೆ ತಿಂಗಳಿಂದ ಕೊರೋನಾ ಮತ್ತು ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ನೀಡಲಾಗುತ್ತಿದೆ. ಆದರೆ ಅಗತ್ಯತೆಗಿಂತ ಹೆಚ್ಚಿನ ಸುದ್ದಿ ಬಿತ್ತರಿಸುತ್ತಿರುವ ಮಾಧ್ಯಮಗಳಿಗೂ ಲಾಕ್ ಡೌನ್ ಬೇಕಾಗಿದೆ, ಏಕೆಂದರೆ ಅತಿಯಾದ ಸುದ್ದಿಯಿಂದ ಸಾರ್ವಜನಿಕರ ಕುತೂಹಲ ಮತ್ತಷ್ಚು ಹೆಚ್ಚುತ್ತದೆ. ವಿಕಾಸ್ ದುಬೆ ಹೊರತುಪಡಿಸಿ ಮಾಧ್ಯಮಗಳಲ್ಲಿ ಕೋವಿಡ್ ಹೊರತುಪಡಿಸಿ ಬೇರೆ ಯಾವುದೇ ಸುದ್ದಿ ಬಂದಿಲ್ಲ. ಹಾಗಾಗಿ ಸಮತೋಲನ ಅಗತ್ಯ ಎಂದು ನಿಮ್ಹಾನ್ಸ್  ನಿರ್ದೇಶತ ಡಾ,ಗಂಗಾಧರ್ ಅಭಿಪ್ರಾಯ ಪಟ್ಟಿದ್ದಾರೆ.

ಕೋವಿಡ್ ಎಲ್ಲರ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ ಎಂದು ಹೇಳಿರುವ ಅವರು ಮನೆಯ ಪರಿಕಲ್ಪನೆಯು ಕಳೆದುಹೋಗಿದೆ ಏಕೆಂದರೆ ಮನೆ ಒಂದು ಕುಟುಂಬಕ್ಕೆ ಕೆಲಸದ ಸ್ಥಳ, ಜಿಮ್ ಮತ್ತು ಶಾಲೆಯಾಗಿ ಮಾರ್ಪಟ್ಟಿದೆ. ಮಾಧ್ಯಮದವರು ಕೂಡ ಒತ್ತಡದಲ್ಲಿದ್ದಾರೆ. ಕೋವಿಡ್ ಪ್ರಕರಣಗಳ ಬಗ್ಗೆ ವರದಿ ಮಾಡುವ ಅಪಾಯವಿದೆ ಎಂದು ಡಾ.ಚತುರ್ವೇದಿ ಹೇಳಿದರು.

ಇಂಥಹ ಸಮಯದಲ್ಲಿ ಮಾಧ್ಯಮಗಳ ಪಾತ್ರ ಮಹತ್ವವಾಗಿದೆ ,ಅವರು ಸತ್ಯ ಹೇಳಬೇಕು ಮತ್ತು ಕಿಲ್ಲರ್ ವೈರಸ್  ಸೂಪರ್ ಸ್ಪ್ರೆಡರ್‌ಗಳು ಎಂಬ ಭಯಾನಕ ವಿಶೇಷಣಗಳನ್ನು ಬಳಸಬಾರದು ಎಂದು  ನಿಮ್ಹಾನ್ಸ್ ವೈದ್ಯೆ ಡಾ. ಕೆಎಸ್ ಮೀನಾ ಹೇಳಿದ್ದಾರೆ.

Comments

  1. Yes. This. Is. The. Best. Disision.

    ReplyDelete
  2. Yes. This. Is. The. Best. Disision.

    ReplyDelete
  3. Really very much true. Media is creating fear in people's mind.

    ReplyDelete

Post a Comment