ಭಾರತ ಚೀನಾ ಗಡಿಯಲ್ಲಿ ಚೀನಿ ಸೈನಿಕರ ಅಟ್ಟಹಾಸ ಬಳಿಕ ಪ್ರಧಾನಿ ನರೇಂದ್ರ ಮೋದಿಯವರು ಇದೇ ಮೊದಲ ಬಾರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಲಡಾಖ್'ಗೆ ಭೇಟಿ ನೀಡಿದ್ದಾರೆ. ಪ್ರಧಾನಿ ಮೋದಿಯವರೊಂದಿಗೆ ರಕ್ಷಣಾ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್, ಭಾರತೀಯ ಸೇನಾ ಮುಖ್ಯಸ್ಥ ಮನೋಜ್ ಮುಕುಂದ್ ನರಾವಣೆಯವರು ಕೂಡ ಸಾಥ್ ನೀಡಿದ್ದು, ಗಡಿಯಲ್ಲಿ ಪರಿಸ್ಥಿತಿ ಕುರಿತು ಮಾಹಿತಿ ನೀಡಿದ್ದಾರೆ.
ಇಂದು ಬೆಳಕಿನ ಜಾವ ಲಡಾಖ್'ನ ಲೆಹ್ ಜಿಲ್ಲೆಯ ನಿಮೂಗೆ ಭೇಟಿ ನೀಡಿದ್ದು, ಭದ್ರತೆಗೆ ನಿಯೋಜನೆಗೊಂಡಿದ್ದ ಯೋಧರ ಜೊತೆಗೆ ಮಾತುಕತೆ ನಡೆಸಿದ್ದಾರೆ. ಪ್ರಸ್ತುತ ಭಾರತೀಯ ಸೇನಾಪಡೆ, ವಾಯುಪಡೆ ಹಾಗೂ ಐಟಿಬಿಪಿ ಯೋಧರೊಂದಿಗೂ ಮಾತುಕತೆ ನಡೆಸುತ್ತಿದ್ದಾರೆ ಎಂದು ವರದಿ ಆಗಿದೆ.
ಸೇನೆಯ 14 ಕೋರ್‌ನ ಹಿರಿಯ ಸೇನಾಧಿಕಾರಿಗಳು ಬಿಪಿನ್ ರಾವತ್ ಅವರು ಲಡಾಖ್ ಗಡಿಯಲ್ಲಿನ ಸದ್ಯದ ಸ್ಥಿತಿಗತಿಯ ಕುರಿತು ಮಾಹಿತಿ ನೀಡಲಿದ್ದಾರೆ ಎಂದು ಹೇಳಲಾಗಿದೆ.ಈಗಾಗಲೇ ಭೂಸೇನಾ ಮುಖ್ಯಸ್ಥ ಜನರಲ್ ಎಂಎಂ ನರವಣೆ ಲೇಹ್ ಮತ್ತು ಲಡಾಖ್‌ಗೆ ಭೇಟಿ ನೀಡಿದ್ದು, ಇದೀಗ ಪ್ರಧಾನಿ ನರೆಂದ್ರ ಮೋದಿ ಮತ್ತು ಬಿಪಿನ್ ರಾವತ್ ಕೂಡ ಲೇಹ್‌ಗೆ ಭೇಟಿ ನೀಡಿರುವುದು ತಿವ್ರ ಕುತೂಹಲ ಮೂಡಿಸಿದೆ.

Comments
Post a Comment