ಭಾರತಕ್ಕೆ ಟಾಂಗ್ ಕೊಡಲು ನೇಪಾಳ ಸರಕಾರ ನಿರ್ಮಿಸಿದ್ದ ಗಡಿ ಠಾಣೆಗಳಿಂದ ಓಡಿ ಹೋದ ನೇಪಾಳಿ ಸೈನಿಕರು!

 ನೇಪಾಳ ಪ್ರಧಾನಿ ಕೆ.ಪಿ. ಶರ್ಮ ಓಲಿ ಅವರ ಗಾದಿ ಅಲ್ಲಾಡತ್ತಿರುವಂತೆ, ಭಾರತ-ನೇಪಾಳ ಗಡಿಯಲ್ಲಿ ಅವರ ಆಣತಿಯಂತೆ ಹೊಸದಾಗಿ ನಿರ್ಮಿಸಲಾಗಿದ್ದ ಗಡಿಠಾಣೆಗಳನ್ನು ಬಿಟ್ಟು ನೇಪಾಳ ಸಶಸ್ತ್ರ ಪ್ರಹಾರಿ (ಎನ್​ಎಸ್​ಪಿ) ಅಥವಾ ನೇಪಾಳ ಸಶಸ್ತ್ರ ಪೊಲೀಸರು ಓಡಿ ಹೋಗಿದ್ದಾರೆ.
ಕಳೆದ ಕೆಲವು ದಿನಗಳಿಂದ ಎನ್​ಎಸ್​ಪಿ ಯೋಧರು ಹೊಸದಾಗಿ ಸ್ಥಾಪಿಸಿರುವ ಗಡಿಠಾಣೆಯತ್ತ ಸುಳಿದಿಲ್ಲ ಎಂದು ಉತ್ತರಾಖಂಡದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

.ಪಿ. ಶರ್ಮ ಓಲಿ ಒತ್ತಾಸೆಯ ಮೇರೆಗೆ ಭಾರತೀಯ ಭೂಮಿಯನ್ನು ಸೇರಿಸಿಕೊಂಡು ಎನ್​ಎಸ್​ಪಿ ಯೋಧರು ಹೊಸದಾಗಿ ಆರು ಗಡಿಠಾಣೆಗಳನ್ನು ನಿರ್ಮಿಸಿದ್ದರು. ಲಿಪುಲೇಖ್​ ಪಾಸ್​ನಿಂದ ಪಿತ್ತೋರ್​ಗಢ ಜಿಲ್ಲೆಯ ಧಾರ್​ಚುಲಾ ಪಟ್ಟಣಕ್ಕೆ ಸಂಪರ್ಕಿಸುವ ಹೆದ್ದಾರಿಯನ್ನು ಭಾರತ ಉದ್ಘಾಟಿಸಿದ ನಂತರದಲ್ಲಿ ಈ ಬೆಳವಣಿಗೆ ಕಂಡುಬಂದಿತ್ತು.

ತೀರಾ ಕಡಿದಾದ ಪ್ರದೇಶದಲ್ಲಿ ಗಡಿಠಾಣೆಗಳನ್ನು ನಿರ್ಮಿಸುವುದು ಸುಲಭ. ಆದರೆ ಅವುಗಳ ನಿರ್ವಹಣೆ ಸುಲಭದ ಮಾತಲ್ಲ. ಅಲ್ಲದೆ, ಅವುಗಳ ಸ್ಥಾಪನೆಯಿಂದ ಅವರ ಉದ್ದೇಶವನ್ನು ಈಡೇರಿಸಿಕೊಳ್ಳಲು ಅವರಿಗೆ ಸಾಧ್ಯವಾಗಿಲ್ಲ. ಹಾಗಾಗಿ ಅವರು ಗಡಿಠಾಣೆಗಳನ್ನು ತೆರವುಗೊಳಿಸಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.

Comments