ದಕ್ಷಿಣ ಚೀನಾ ಸಮುದ್ರದ ವ್ಯಾಪ್ತಿಯಲ್ಲಿ ಚೀನಾವನ್ನು ನಡುಗಿಸಬಲ್ಲ ಅಮೆರಿಕಾದ ಪರಮಾಣು ಯುದ್ಧ ನೌಕೆಗಳ ಆಗಮನ

ಭಾರತ ಹಾಗೂ ಚೀನಾದ ನಡುವಿನ ಗಡಿ ಸಂಘರ್ಷದ ಮಧ್ಯೆ ಭಾರತದ ಪರವಾಗಿ ನಿಂತು ಚೀನಾದ ವಿರುದ್ಧ ಬಹಿರಂಗ ಹೇಳಿಕೆಗಳನ್ನ ನೀಡುತ್ತಿರುವ ಅಮೆರಿಕ ಚೀನಾಗೆ ನೇರವಾಗಿಯೇ ಠಕ್ಕರ್‌ ನೀಡಿದೆ. ದಕ್ಷಿಣ ಚೀನಾ ಸಮುದ್ರದಲ್ಲಿ ಅಮೆರಿಕದ ನೌಕಸೇನೆ ತಾಲೀಮು ನಡೆಸುವ ಮೂಲಕ ಚೀನಾಗೆ ಸೆಡ್ಡು ಹೊಡೆಯುತ್ತಿದೆ. ಪ್ರಮುಖವಾಗಿ ಅಮೆರಿಕಾದ ಪರಮಾಣು ಯುದ್ಧ ನೌಕೆಗಳ ಆಗಮನ ಚೀನಾದ ಸದ್ದಡಗಿಸಿದೆ. ಇಂಡೋ-ಪೆಸಿಫಿಕ್ ಪ್ರದೇಶವನ್ನು ಬೆಂಬಲಿಸುವ ನಿಟ್ಟಿನಲ್ಲಿ ಅಮೇರಿಕಾ ಈ ಚಟುವಟಿಕೆ ನಡೆಸುತ್ತಿದೆ. ಯುಎಸ್ಎಸ್ ನಿಮಿಟ್ಜ್ (ಸಿವಿಎನ್ 68) ಮತ್ತು ಯುಎಸ್ಎಸ್ ರೊನಾಲ್ಡ್ ರೇಗನ್ (ಸಿವಿಎನ್ 76) ಎಂಬ ಎರಡು ನೌಕೆಗಳು ದಕ್ಷಿಣ ಚೀನಾ ಸಮುದ್ರದಲ್ಲಿ ಕ್ಯಾರಿಯರ್‌ ಕಾರ್ಯಾಚರಣೆ ಹಾಗೂ ವಿವಿಧ ಚಟುವಟಿಕೆಗಳನ್ನ ನಡೆಸಿ ನೇರವಾಗೇ ಚೀನಾಗೆ ಸವಾಲೊಡ್ಡಿದೆ. ಇನ್ನು ಅಮೇರಿಕಾ ಈ ನಡೆಗೆ ಪ್ರತಿಕ್ರಿಯಿಸಿರುವ ಚೀನಾ ಆಗ್ನೇಯ ಏಷ್ಯಾ ದಲ್ಲಿ ಉದ್ವಿಗ್ನತೆ ಹೆಚ್ಚಲು ಅಮೆರಿಕವೇ ನೇರ ಕಾರಣ ಎಂದಿದೆ.

Comments