ಚೀನಿ ಆಪ್ ಗಳ ಮೇಲೆ ನಿಷೇಧ ಹೇರಿದ ಭಾರತಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರೀ ಬೆಂಬಲ

ಭಾರತದಲ್ಲಿ 59 ಚೀನಾ ಆಪ್ ಗಳನ್ನು ನಿಷೇಧಿಸಿರುವುದಕ್ಕೆ ಅಮೆರಿಕಾದಲ್ಲಿ ಭಾರಿ ಬೆಂಬಲ ವ್ಯಕ್ತವಾಗತೊಡಗಿದ್ದು, ಭಾರತದ ಮಾದರಿಯನ್ನು ಅನುಸರಿಸಬೇಕೆಂದು ಅಮೆರಿಕಾದ ಶಾಸಕರು ಆಗ್ರಹಿಸಿದ್ದಾರೆ . ಭಾರತದ  ಈ ಕ್ರಮ  ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದ್ದು, ಇದೇ ಮೊದಲ ಬಾರಿಗೆ ಈ ವಿಷಯದಲ್ಲಿ ಭಾರತಕ್ಕೆ ಅಂತಾರಾಷ್ಟ್ರೀಯ ಬೆಂಬಲವೂ ದೊರೆತಿದೆ.ಈ ಕುರಿತು ಮಾತನಾಡಿರುವ ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕೇಯ್ಲಿ ಮೆಕ್‌ಎನಾನಿ, ಚೀನಾ ಆ್ಯಪ್‌ಗಳನ್ನು ನಿಷೇಧಿಸುವ ಭಾರತದ ಕ್ರಮವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆಂಬಲಿಸಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.

ಟಿಕ್ ಟಾಕ್ ನಂತಹ ಆಪ್ ಗಳು ಅಮೆರಿಕಾದ ಭದ್ರತೆಗೂ ಮಾರಕವಾಗಿದ್ದು, ಅಮೆರಿಕ ಸರ್ಕಾರ ಭಾರತದ ಮಾದರಿಯಲ್ಲಿ ಚೀನಾ ಆಪ್ ಗಳನ್ನು ನಿಷೇಧಿಸಬೇಕೆಂದು ರಿಪಬ್ಲಿಕನ್ ಸೆನೆಟರ್ ಜಾನ್ ಕಾರ್ನಿನ್ ಆಗ್ರಹಿಸಿದ್ದಾರೆ. ರಿಬಬ್ಲಿಕನ್ ಕಾಂಗ್ರೆಸ್ಮನ್ ರಿಕ್ ಕ್ರ್ವಾಫೋರ್ಡ್ ಸಹ ಟಿಕ್ ಟಾಕ್ ನ್ನು ನಿಷೇಧಿಸಬೇಕೆಂದು ಟ್ವೀಟ್ ಮಾಡಿದ್ದಾರೆ.

Comments