ಸಡಕ್ 2 ಬಿಡುಗಡೆಯಾದ ಸ್ವಲ್ಪ ಸಮಯದಲ್ಲೇ ನೆಟ್ಟಿಗರು ಹೇಗೆ ಪಾಠ ಕಲಿಸಿದ್ದಾರೆ ಗೊತ್ತಾ!?

 ಸುಶಾಂತ್ ಸಿಂಗ್ ರಾಜಪೂತ್ ಅವರ ಅನುಮಾನಾಸ್ಪದ ಸಾವಿನ ಬಳಿಕ ಬಾಲಿವುಡ್ ಚಿತ್ರರಂಗದ ಒಂದು ವರ್ಗ ಬಾಲಿವುಡ್ ಪ್ರೇಕ್ಷಕರ ಕೆಂಗಣ್ಣಿಗೆ ಗುರಿಯಾಗಿದ್ದು, ಆನೆ ನಡೆದಿದ್ದೇ ದಾರಿ ಎಂಬಂತೆ ಅಹಂಕಾರದಿಂದ ಮೆರೆಯುತ್ತಿದ್ದ ಸ್ಟಾರ್ ನಟರ ಮದವನ್ನೆಲ್ಲಾ ಇಳಿಸುತ್ತಿದ್ದಾರೆ. 

ಅನಾವಶ್ಯಕ ಹೇಳಿಕೆ ನೀಡಿ ದೇಶಭಕ್ತ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದ್ದ ಶಾರುಖ್ ಖಾನ್, ಅಮೀರ್ ಖಾನ್ ಹಾಗೂ ಸಲ್ಮಾನ್ ಖಾನ್ ರಿಗೆ ತಕ್ಕ ಪಾಠ ಕಲಿಸಿದ್ದ ಭಾರತೀಯರು ಇದೀಗ ಸುಶಾಂತ್ ಸಿಂಗ್ ಸಾವಿಗೆ ಒಂದು ರೀತಿಯಲ್ಲಿ ಕಾರಣರಾಗಿರೋ ಕರಣ್ ಜೋಹಾರ್, ಮಹೇಶ್ ಭಟ್ ಸೇರಿದಂತೆ ಅವರು ಬೆಳೆಸುತ್ತಿರೋ ಸ್ಟಾರ್ ಕಿಡ್ ಗಳಿಗೆ ಪಾಠ ಕಲಿಸಲು ಮುಂದಾಗಿದ್ದಾರೆ. 

ಇತ್ತೀಚೆಗಷ್ಟೇ ಅಲಿಯಾ ಭಟ್ ರ ಸಡಕ್ 2 ಚಿತ್ರದ ಟ್ರೈಲರ್ ಯುಟ್ಯೂಬ್ ನಲ್ಲಿ ಬಿಡುಗಡೆಗೊಂಡಿತ್ತು. ಈ ವಿಡಿಯೋಗೆ ಬರೋಬ್ಬರಿ 1ಕೋಟಿ 20 ಲಕ್ಷ ಜನರು ಡಿಸ್ಲೈಕ್ ಮಾಡಿದ್ದರು ಈ ವಿಚಾರ ಹೊಸ ದಾಖಲೆ ಸೃಷ್ಠಿ ಮಾಡಿ ನೆಪೋಟಿಸಂ ಮಾಡೋ ವರ್ಗಕ್ಕೆ ತಲೆನೋವಾಗಿ ಪರಿಣಮಿಸಿತ್ತು. 

ಇದೀಗ ನೆನ್ನೆ ಸಾಯಂಕಾಲ ಈ ಸಡಕ್ 2 ಚಿತ್ರ ಹಾಟ್ ಸ್ಟಾರ್ ಫ್ಲ್ಯಾಟ್ಫಾರ್ಮ್ ನಲ್ಲಿ ಬಿಡುಗಡೆಗೊಂಡಿದ್ದು, ಈ ಚಿತ್ರ ಅವರ ಅಭಿಮಾನಿಗಳಲ್ಲೇ ನಿರಾಸೆ ಮೂಡಿಸಿದೆ. ಈ ಸಂದರ್ಭದಲ್ಲಿ ಸುಶಾಂತ್ ಸಿಂಗ್ ಅಭಿಮಾನಿಗಳು ಹೊಸ ಅಭಿಯಾನ ಕೈಗೊಂಡಿದ್ದು, ಈ ಚಿತ್ರದ ಐಎಂಡಿಬಿ ರೇಟಿಂಗ್ ನಲ್ಲಿ ಕೇವಲ ಒಂದು ಸ್ಟಾರ್ ನೀಡೋ ಅಭಿಯಾನ ಕೈಗೊಂಡಿದ್ದಾರೆ. 

ಪ್ರಸ್ತುತ 12000 ಕ್ಕೂ ಹೆಚ್ಚು ಜನರು ರೇಟಿಂಗ್ ಮಾಡಿದ್ದು, ಇದರಲ್ಲಿ ಚಿತ್ರಕ್ಕೆ ಕೇವಲ ಒಂದು ಸ್ಟಾರ್ ರೇಟಿಂಗ್ ಲಭಿಸಿದೆ. ಈ ಐಎಂಡಿಬಿ ರೇಟಿಂಗ್ ನಲ್ಲಿ ಒಟ್ಟು ಹತ್ತು ಸ್ಟಾರ್ ಗಳಿದ್ದು ಚಿತ್ರ ನೋಡಿದ ಪ್ರೇಕ್ಷಕರು ಚಿತ್ರ ಹೇಗಿದೆ ಎಂಬುವುದರ ಬಗ್ಗೆ 10 ಸ್ಟಾರ್ ನಲ್ಲಿ ರೇಟಿಂಗ್ ನೀಡುತ್ತಾರೆ. ಈ ರೇಟಿಂಗ್ ಚಿತ್ರ ನೋಡಬೇಕು ಅಂತ ಯೋಚನೆ ಮಾಡೋ ಇತರ ಪ್ರೇಕ್ಷಕರಿಗೆ ಈ ಚಿತ್ರ ನೋಡಲೊ ಬಿಡಲೊ ಎನ್ನುವ ನಿರ್ಧಾರ ಮಾಡಲು ವೇದಿಕೆಯಾಗಿದೆ.



Comments