ಚೀನಾದ ಭೂ ಕಬಳಿಕೆಯ ಅಟ್ಟಹಾಸಕ್ಕೆ ನೇಪಾಳ ಹೊಸ ಬಲಿಪಶುವಾಗಿದೆ, ನೇಪಾಳದ ಬರೊಬ್ಬರಿ 7 ಜಿಲ್ಲೆಗಳ ಭೂಮಿಯನ್ನು ಚೀನಾ ಅತಿಕ್ರಮಣ ಮಾಡಿದೆ. ನೇಪಾಳಿ ಸರ್ಕಾರದ ಅಧಿಕೃತ ಡಾಟಾ ನೀಡಿರುವ ಮಾಹಿತಿಯ ಪ್ರಕಾರ ಚೀನಾ ಜೊತೆ ಗಡಿ ಹಂಚಿಕೊಂಡಿರುವ 7 ಜಿಲ್ಲೆಗಳಲ್ಲಿ ಚೀನಾ ಅಕ್ರಮವಾಗಿ ಭೂಮಿಯನ್ನು ವಶ ಪಡಿಸಿಕೊಂಡಿದ್ದು, ಅತಿಕ್ರಮಣ ಹೆಚ್ಚಾಗತೊಡಗಿದೆ ಎಂದು ವರದಿಯಾಗಿದೆ.
ನೇಪಾಳದ ಕಮ್ಯುನಿಸ್ಟ್ ಪಕ್ಷ ಚೀನಾದ ಕಮ್ಯುನಿಸ್ಟ್ ಪಕ್ಷದ ವಿಸ್ತರಣಾವಾದದ ಅಜೆಂಡಾವನ್ನು ಮರೆಮಾಚಲು ಯತ್ನಿಸುತ್ತಿದ್ದು, ಚೀನಾ ಅತಿಕ್ರಮಣ ಮಾಡಿದರೂ ನೇಪಾಳದ ಪ್ರಧಾನಿ ಕೆ.ಪಿ ಶರ್ಮಾ ಒಲಿ ಮೌನಕ್ಕೆ ಶರಣಾಗಿದ್ದಾರೆ ಎಂದು ಜ್ಹೀ ನ್ಯೂಸ್ ವರದಿ ಪ್ರಕಟಿಸಿದೆ. ಚೀನಾ-ನೇಪಾಳದ ರಾಜತಾಂತ್ರಿಕ ತಜ್ಞರು ಈ ಬಗ್ಗೆ ಮಾತನಾಡಿದ್ದು, ಚೀನಾ ಸಿಸಿಪಿಗೆ ಸಿಟ್ಟು ಬರಬಹುದೆಂಬ ಕಾರಣಕ್ಕಾಗಿ ಚೀನಾದ ವಿಸ್ತರಣಾವಾದ ಸ್ಪಷ್ಟವಾಗಿ ಕಾಣುತ್ತಿದ್ದರೂ ನೇಪಾಳದ ಕೆಪಿ ಒಲಿ ನೇತೃತ್ವದ ಸರ್ಕಾರ ಈ ಬಗ್ಗೆ ಮಾತನಾಡದೇ ಮೌನಕ್ಕೆ ಶರಣಾಗಿದೆ ಎಂದು ಪರಿಸ್ಥಿತಿಯನ್ನು ವಿಶ್ಲೇಷಿಸಿದ್ದಾರೆ.
ದೋಲಖಾ, ಗೂರ್ಖಾ, ಡಾರ್ಚುಲಾ, ಹಮ್ಲಾ, ಸಿಂಧುಪಾಲ್ಚೌಕ್, ಸಂಖುವಸಭ ಮತ್ತು ರಸುವಾ ಚೀನಾದ ಅತಿಕ್ರಮಣಕ್ಕೆ ತುತ್ತಾಗಿರುವ ನೇಪಾಳದ ಜಿಲ್ಲೆಗಳಾಗಿದೆ. ನೇಪಾಳದ ದೋಲಾಖ ದಲ್ಲಿ ಚೀನಾ ತನ್ನ ಅಂತಾರಾಷ್ಟ್ರೀಯ ಗಡಿಯನ್ನು 1,500 ಮೀಟರ್ ನಷ್ಟು ಒತ್ತುವರಿ ಮಾಡಿದೆ.
ಮಾನವಹಕ್ಕುಗಳ ಆಯೋಗವೂ ಸಹ ಚೀನಾದ ದುರ್ವರ್ತನೆಯನ್ನು ವರದಿ ಮಾಡಿದ್ದು, ಡಾರ್ಚುಲಾದ ಜಿಯುಜಿಯು ಗ್ರಾಮದ ಒಂದು ಭಾಗವನ್ನೇ ಚೀನಾ ಆಕ್ರಮಿಸಿಕೊಂಡಿದೆ. ಈ ಭಾಗದಲ್ಲಿ ಈ ವರೆಗೂ ನೇಪಾಳದ್ದಾಗಿದ್ದ ಹಲವಾರು ಮನೆಗಳನ್ನು ಚೀನಾ ವಶಕ್ಕೆ ತೆಗೆದುಕೊಂಡಿದ್ದು ಚೀನಾದ ಪ್ರಾಂತ್ಯಕ್ಕೆ ಸೇರಿಸಿಕೊಂಡಿದೆ.
PM KP Oli remains mum as China illegally grabs land in seven districts of Nepalhttps://t.co/3LKqkn5uaM#Nepal
— Zee News English (@ZeeNewsEnglish) August 19, 2020
Comments
Post a Comment