ನಾನು ಕಟ್ಟಾ ಕಾಂಗ್ರೆಸ್ ಪಕ್ಷಕ್ಕೆ ಸೇರಿದವ ನನ್ನದು ಹಿಂದೂ ಧರ್ಮ ಎಂದ ನವೀನ್

ಬೆಂಗಳೂರು :ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಪ್ರದೇಶದಲ್ಲಿ  ಫೇಸ್ಬುಕ್ ಪೋಸ್ಟ್ಗೆ ಸಂಬಂಧಿಸಿದಂತೆ ಮತೀಯ ತೀವ್ರಗಾಮಿಗಳು ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ್ ಅವರ ಮನೆ ಸೇರಿ ಪೊಲೀಸ್ ಠಾಣೆ ಮೇಲೆ ದಾಳಿ ನಡೆಸಿದ್ದರು . ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು  ತೀವ್ರಗಾಮಿಗಳನ್ನು  ಪೊಲೀಸರು ಬಂಧಿಸಿದ್ದಾರೆ.ಈ ಗಲಭೆಯ ಹಿಂದೆ ಎಸ್ಡಿಪಿಐ ಕೈವಾಡ ಇರುವುದು ಇದೀಗ ಬಹಿರಂಗಗೊಂಡಿದೆ.

 ಇನ್ನು ಫೇಸ್ಬುಕ್ ಪೋಸ್ಟ್ ಸಂಬಂಧಿಸಿ ಬಂಧಿತನಾಗಿರುವ ಅಖಂಡ ಶ್ರೀನಿವಾಸ ಮೂರ್ತಿ ಅವರ ಸಂಬಂಧಿ ನವೀನ್ ಅವರು  ಹೇಳಿರುವ ಪ್ರಕಾರ  ನನ್ನದು ಕಾಂಗ್ರೆಸ್ ಪಕ್ಷ ಮತ್ತು ನಾನು ಹಿಂದೂ ಧರ್ಮಕ್ಕೆ ಸೇರಿದವ ಕಾಂಗ್ರೆಸ್ನಲ್ಲಿದ್ದ ಮಾತ್ರಕ್ಕೆ ನಾನು ಹಿಂದೂ ಧರ್ಮದ ಪರ ಮಾತನಾಡಬಾರದೇ ಎಂದು ನವೀನ್ ಪೊಲೀಸರನ್ನೇ ಪ್ರಶ್ನಿಸಿದ್ದಾನೆ.ನಾನು ಸಾಮಾಜಿಕ ಜಾಲತಾಣದಲ್ಲಿ ಯಾವುದೇ ಧರ್ಮದ ವಿರುದ್ಧ ಅವಹೇಳನಕಾರಿಯಾಗಿ ಪೋಸ್ಟ್ ಗಳನ್ನು ಪ್ರಕಟಿಸಿಲ್ಲ .ಹಿಂದೂ ಧರ್ಮಕ್ಕೆ ಧಕ್ಕೆ ತರುವ ಕೃತ್ಯಗಳನ್ನು ಖಂಡಿಸುತ್ತಾ ಬಂದಿದ್ದೇನೆ ಎಂದು ಪೊಲೀಸ್ ವಿಚಾರಣೆ ವೇಳೆ ನವೀನ್ ತಿಳಿಸಿದ್ದಾರೆ .

ಮತೀಯ ತೀವ್ರಗಾಮಿಗಳು ಸಾಮಾಜಿಕ ಜಾಲತಾಣದಲ್ಲಿ ಹಿಂದೂ ಧರ್ಮ ಹಾಗೂ ಆಚರಣೆ ವಿರುದ್ಧ ಅವಹೇಳಕಾರಿಯಾಗಿ ಪೋಸ್ಟ್ ಹಾಕುವವರಿಗೆ ಕಾಮೆಂಟ್ ಬಾಕ್ಸ್ ನಲ್ಲಿ ತಿರುಗೇಟು ನೀಡಿದ್ದೇನೆ .ಇದೇ ವಿಚಾರವನ್ನು ಮುಂದಿಟ್ಟು ಹಲವರು ನನ್ನ ವಿರುದ್ಧ ಪಿತೂರಿ ನಡೆಸಿದ್ದಾರೆ ಕೆಲವರು ಸಾಮಾಜಿಕ ಜಾಲತಾಣದಲ್ಲಿ ಬೆದರಿಕೆ ಹಾಕಿ ಜೀವ ತೆಗೆಯುವುದಾಗಿ ಬೆದರಿಸಿದ್ದಾರೆ ಎಂದು ನವೀನ್ ಹೇಳಿಕೆ ನೀಡುವುದಾಗಿ ವರದಿಯ‍ಾಗಿದೆ.

Comments