ಸಂಜನಾ ಉಲ್ಫ್ ಮಾಹಿರಾ ಮತಾಂತರವನ್ನು ಖಚಿತಪಡಿಸಿದ ಮೌಲ್ವಿಜಲಾಲುದ್ದಿನ್

 ಡ್ರಗ್ಸ್ ಜಾಲದಲ್ಲಿ ಭಾಗಿಯಾಗಿ ಬಂಧಿತರಾಗಿರುವ ಸಂಜನಾ ಗಲ್ರಾನಿ ಅಲಿಯಾಸ್ ಸಂಜನಾ , 2018ರಲ್ಲೇ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ. ತಮ್ಮ ಹೆಸರನ್ನು ಮಾಹಿರಾ ಎಂದು ಬದಲಾಯಿಸಿಕೊಂಡಿದ್ದಾರೆ.ಈ ಬಗ್ಗೆ ಬೆಂಗಳೂರಿನ ಟ್ಯಾನಿ ರಸ್ತೆಯ ಅರೆಬಿಕ್ ಮದರಸದ ಧರ್ಮ ಗುರು ಮಹಮ್ಮದ್ ಜಲಾಲುದ್ದಿನ್ ನೀಡಿರುವ ಹೇಳಿಕೆಯಲ್ಲಿ   2018ರಲ್ಲಿ ಇಬ್ಬರು ಜೊತೆ ಬಂದಿದ್ದ ಸಂಜನಾ ಗಲ್ರಾನಿ ಸ್ವಇಚ್ಛೆಯ ಮೇರೆಗೆ ಮತಾಂತರ ಆಗಿದ್ದಾರೆ ಎಂದು ತಿಳಿಸಿದ್ದಾರೆ.



ಸಂಜನಾ ಅವರ ನೈಜ ಹೆಸರು ಅರ್ಚನಾ. ತಂದೆ ಹೆಸರು ಮನೋಹರ್. ವೈದ್ಯರಾಗಿರುವ ಇಸ್ಲಾಂ ಧರ್ಮದ ಯುವಕರೊಬ್ಬರ ಜತೆ ಮದುವೆ ನಿಶ್ಚಯ ಮಾಡಿಕೊಂಡಿರುವ ಅರ್ಚನಾ, ಅದಕ್ಕೂ ಮುನ್ನವೇ ಇಸ್ಲಾಂ ಧರ್ಮಕ್ಕೆ ಮತಾಂತರವಾಗಿದ್ದಾರೆ ಎನ್ನಲಾಗಿದೆ. 'ಹೆಬ್ಬಾಳ ಭುವನೇಶ್ವರಿ ನಗರದ ಅರ್ಚನಾ ಮನೋಹರ್ ಗಲ್ರಾನಿ ಅವರು ಯಾವ ಒತ್ತಡಕ್ಕೂ ಒಳಗಾಗದೇ ಸ್ವಯಂಪ್ರೇರಿತರಾಗಿ ಇಸ್ಲಾಂ ಧರ್ಮಕ್ಕೆ ಸೇರಿದ್ದಾರೆ. ಅವರ ಹೊಸ ಹೆಸರು ಮಾಹಿರಾ’ ಎಂದು ದೃಢೀಕರಣ ಪತ್ರದಲ್ಲಿ ಉಲ್ಲೇಖಿಸಲಾಗಿದೆ. 2018ರ ಅಕ್ಟೋಬರ್ 9ರಂದು ಈ ಪತ್ರವನ್ನು ಸಂಜನಾ ಅವರಿಗೆ ನೀಡಲಾಗಿದೆ. ಪತ್ರವನ್ನೇ ಆಧರಿಸಿ ನ್ಯಾಯಾಲಯಕ್ಕೆ ಸಂಜನಾ ಅಫಿಡ್‌ವಿಟ್ ಸಲ್ಲಿಸಿದ್ದಾರೆ ಎಂದು ಗೊತ್ತಾಗಿದೆ.





Comments