ಬೆಂಗಳೂರಿನ ಕೆ.ಜೆ ಹಳ್ಳಿ ಹಾಗೂ ಡಿ.ಜೆ ಹಳ್ಳಿಯಲ್ಲಿ ಇತ್ತೀಚಿಗೆ ಮತಾಂಧರು ಫೇಸ್ಬುಕ್ ಕಾಮೆಂಟ್ ವಿಚಾರಕ್ಕೆ ಸಂಬಂಧಿಸಿದಂತೆ ಭಾರೀ ಗಲಭೆಯನ್ನು ನಡೆಸಿದ್ದರು. ಈ ಗಲಭೆಯನ್ನು ಪೊಲೀಸ್ ಇಲಾಖೆ ಸಮರ್ಥವಾಗಿ ನಿಭಾಯಿಸಿ ಕೆಲವೇ ಗಂಟೆಯಲ್ಲಿ ಗಲಭೆಯನ್ನು ತಹಬದಿಗೆ ತಂದು ಮೂವರು ಗಲಭೆಕೋರರನ್ನು ಎನ್ಕೌಂಟರ್ ಮಾಡಿತ್ತು.
ಈ ಗಲಭೆ ಸಂದರ್ಭ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿತ್ತು. ಗಲಭೆಕೋರರು ಮಾನವ ಸರಪಳಿ ರಚನೆ ಮಾಡೋ ಮೂಲಕ ಹಿಂದೂ ದೇವಸ್ಥಾನಕ್ಕೆ ರಕ್ಷಣೆ ನೀಡೋ ವಿಡಿಯೋ ಇದಾಗಿದ್ದು, ಇದು ಸಾಕಷ್ಟು ವೈರಲ್ ಆಗಿ ಮತಾಂಧರ ಬಣ್ಣ ಬಯಲಾಗಿತ್ತು.
ಇದೀಗ ಪ್ರಸ್ತುತ ಸ್ವೀಡನ್ ನಲ್ಲಿಯೂ ಸಹ ಕ್ಷುಲಕ ವಿಚಾರಕ್ಕೆ ಸಂಬಂಧಿಸಿದಂತೆ ಮತಾಂಧರು ಗಲಭೆ ನಡೆಸುತ್ತಿದ್ದು, ನಿರಾಶ್ರಿತರಾಗಿದ್ದ ತಮಗೆ ಆಶ್ರಯ ನೀಡಿದ್ದ ದೇಶಕ್ಕೆ ಬೆಂಕಿ ಹಚ್ಚುತ್ತಿದ್ದಾರೆ. ಇದೀಗ ಸ್ವೀಡನ್ ನಲ್ಲಿ ನಡೆದ ಗಲಭೆಗೂ ಹಾಗೂ ನಮ್ಮ ಬೆಂಗಳೂರಿನ ಡಿಜೆ ಹಳ್ಳಿಯಲ್ಲಿ ನಡೆದ ಗಲಭೆಗೂ ಸಾಮ್ಯತೆ ಕಂಡು ಬಂದಿದೆ.
ಇಲ್ಲಿ ನಡೆದಂತೆ ಸ್ವೀಡನ್ ನಲ್ಲಿಯೂ ಸಹ ಗಲಭೆಕೋರರ ಒಂದು ಗುಂಪು ಮಾನವ ಸರಪಳಿ ಮಾಡೋ ಮೂಲಕ ಚರ್ಚ್ ಒಂದಕ್ಕೆ ರಕ್ಷಣೆ ನೀಡೋ ವಿಡಿಯೋ ಮಾಡಿ ಡ್ರಾಮಾ ಮಾಡಲು ಶುರು ಮಾಡಿದೆ. ಈ ವಿಡಿಯೋವನ್ನು ಇಟ್ಟುಕೊಂಡು ಬೆಂಗಳೂರಿನಲ್ಲಿ ನಡೆದಂತೆ ಅಲ್ಲಿನ ಬುದ್ಧಿಜೀವಿಗಳು ಗಲಭೆಕೋರರು ಅಮಾಯಕರು ಎಂಬಂತೆ ಬಿಂಬಿಸಿ ವೈರಲ್ ಮಾಡುತ್ತಿದ್ದಾರೆ.

Comments
Post a Comment