ಪ್ರಸ್ತುತ ಸುದ್ದಿಯಲ್ಲಿರುವ ಬಾಲಿವುಡ್ ನಟಿ ಕಂಗನಾ ರಣಾವತ್ ಅವರಿಗೆ ವೈ–ಪ್ಲಸ್ ಶ್ರೇಣಿಯ ಭದ್ರತೆ ಒದಗಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದ ಬಳಿಕ ಕಂಗನಾ ಅವರು ಬಾಲಿವುಡ್ ಉದ್ಯಮದ ಕೆಲವು ವಲಯಗಳಲ್ಲಿರುವ ಡ್ರಗ್ಸ್ ಬಳಕೆ ಕುರಿತು ಹೇಳಿಕೆ ನೀಡಿದ್ದರು. ಇದರಿಂದಾಗಿ ಅವರಿಗೆ ಬೆದರಿಕೆ ಕರೆಗಳು ಬಂದಿರುವ ಕಾರಣ ಈ ಭದ್ರತೆ ಒದಗಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಗೃಹ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಅರೆ ಸೇನಾಪಡೆ ಸಿಬ್ಬಂದಿ ಮೂಲಕ ಕಂಗನಾ ಅವರಿಗೆ ವೈ– ಪ್ಲಸ್ ಭದ್ರತೆ ಕಲ್ಪಿಸಲಾಗುವುದು. ಒಬ್ಬ ಕಮಾಂಡೊ ಮತ್ತು ಪೊಲೀಸರು ಸೇರಿದಂತೆ 11 ಮಂದಿ ಭದ್ರತಾ ಸಿಬ್ಬಂದಿಯನ್ನು ವೈ– ಪ್ಲಸ್ ಶ್ರೇಣಿ ಒಳಗೊಂಡಿರುತ್ತದೆ.ಇನ್ನು ಕೇಂದ್ರ ಸರಕಾರದ ಈ ನಿರ್ಧಾರದ ವಿರುದ್ಧ ಶಿವಸೇನೆ ನಾಯಕರು ಕೆಂಡ ಕಾರಿದ್ದಾರೆ.
Centre approves ‘Y’ level security for actor #KanganaRanaut: Sources pic.twitter.com/YKmHKGE3mZ
— ANI (@ANI) September 7, 2020
Comments
Post a Comment