ವ್ಯಾಪಾರ ಇಲ್ಲದೆ ಕಣ್ಣೀರು ಹಾಕಿದ ಬೀದಿ ವ್ಯಾಪಾರಿ ಅಜ್ಜನ ವಿಡಿಯೋ ವೈರಲ್

 ಕೊರೊನಾ ಎಂಬ ಮಹಾ ಮಾರಿ ಅನೇಕ ಜನರ  ಬದುಕನ್ನು ಅತಂತ್ರ ಗೊಳಿಸಿದೆ. ಹಲವರು ಕೆಲಸ ಕಳೆದುಕೊಂಡಿದ್ದಾರೆ. ಬೀದಿ ವ್ಯಾಪಾರಿಗಳು ಅತಂತ್ರರಾಗಿದ್ದಾರೆ .ಈ ಮಧ್ಯೆ ಸಾಮಾಜಿಕ ಜಾಲತಾಣಗಳು ಅನೇಕರಿಗೆ ನೆರವಾಗಿವೆ. ಇದಕ್ಕೆ ದೆಹಲಿಯ ಮಾಲವಿಯಾ ನಗರದ ವೃದ್ಧ ದಂಪತಿ ವಿಡಿಯೋ ಉದಾಹರಣೆ.

80 ವರ್ಷದ ವೃದ್ಧ ದಂಪತಿ ಡಾಬಾ ನಡೆಸುತ್ತಿದ್ದಾರೆ. ಬಾಬಾ ಹೆಸರಿನಲ್ಲಿ ಡಾಬಾ ನಡೆಸುತ್ತಿದ್ದಾರೆ. ಕೊರೊನಾ ನಂತ್ರ ಅವ್ರ ಡಾಬಾಕ್ಕೆ ಜನರು ಬರ್ತಿಲ್ಲ. ಇದ್ರಿಂದ ತೀವ್ರ ತೊಂದರೆಗೊಳಗಾದ ವೃದ್ಧ, ಕ್ಯಾಮರಾ ಮುಂದೆ ಕಣ್ಣೀರಿಟ್ಟಿದ್ದರು. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿತ್ತು. ವೃದ್ಧನ ವಿಡಿಯೋ ಅನೇಕರ ಕಣ್ಣಲ್ಲಿ ನೀರು ತರಿಸಿದ್ದು ಸುಳ್ಳಲ್ಲ.

ಈಗ ವೃದ್ಧ ದಂಪತಿಗೆ ಅನೇಕರು ನೆರವಿನ ಹಸ್ತ ಚಾಚಿದ್ದಾರೆ. ಬಾಲಿವುಡ್ ನಿಂದ ಕ್ರಿಕೆಟ್ ಕ್ಷೇತ್ರದವರೆಗೆ ಅನೇಕರು ಸಹಾಯಕ್ಕೆ ಮುಂದೆ ಬಂದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗ್ತಿದ್ದಂತೆ ಡಾಬಾ ಮುಂದೆ ಜನರ ಸಾಲಿದೆ. ಅನೇಕರು ಅಜ್ಜನ ಡಾಬಾಕ್ಕೆ ಹೋಗಿ ಊಟ ಮಾಡ್ತಿದ್ದಾರೆ.ವಿಡಿಯೋ ನೋಡಿ 

Comments