ಫ್ರಾನ್ಸ್ ಅಧ್ಯಕ್ಷ ಎಮ್ಯಾನ್ಯುಲ್ ಮ್ಯಾಕ್ರೋನ್ ವಿರುದ್ಧ ಪ್ರತಿಭಟನೆ ನಡೆಸಿ ಶಾಂತಿ ಭಂಗ ಮಾಡಲು ಸಂಚು ರೂಪಿಸಿದ ಮಧ್ಯಪ್ರದೇಶದ ಕಾಂಗ್ರೆಸ್ ಶಾಸಕ ಸೇರಿದಂತೆ 2ಸಾವಿರ ಮಂದಿಯ ಮೇಲೆ ಪೋಲೀಸರು ಪ್ರಕರಣ ದಾಖಲಿಸಿದ್ದಾರೆ.
ಫ್ರಾನ್ಸ್ ನಲ್ಲಿ ಮತೀಯ ತೀವ್ರಗಾಮಿಗಳು ಉಗ್ರರ ದಾಳಿ ನಡೆಸಿದ ಹಿನ್ನೆಲೆಯಲ್ಲಿ ಫ್ರಾನ್ಸ್ ಪ್ರಧಾನಿ ನಿರ್ದಿಷ್ಟ ಧರ್ಮವನ್ನು ಗುರಿಯಾಗಿಸಿ ಪ್ರವಾದಿ ಮಹಮ್ಮದ್ ಅವರನ್ನು ಅಪಮಾನಿಸಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಶಾಸಕ ಆರ್ ಎಂ ಮಸೂದ್ ಮಧ್ಯಪ್ರದೇಶದ ಇಕ್ಬಾಲ್ ಮೈದಾನದಲ್ಲಿ ಬೃಹತ್ ಪ್ರತಿಭಟನೆ ಆಯೋಜಿಸಿದ್ದರು .
ಈ ಪ್ರತಿಭಟನೆಯಲ್ಲಿ ಶಾಂತಿ ಭಂಗದ ಸಂಚು ಅರಿತ ಕೂಡಲೇ ಮಧ್ಯಪ್ರದೇಶದ ಬಿಜೆಪಿ ಸರ್ಕಾರ ಒಟ್ಟು 2ಸಾವಿರ ಮಂದಿಯ ಮೇಲೆ ಪ್ರಕರಣ ದಾಖಲಿಸಿ ಶಾಂತಿ ಭಂಗ ಮಾಡದಂತೆ ಕಟುವಾದ ಎಚ್ಚರಿಕೆ ನೀಡಿದೆ .ಇನ್ನು ಮುಂಬೈನ ಜೆಜೆ ಫ್ಲೈಓವರ್ ಕೆಳಗಿನ ಮೊಹಮ್ಮದ್ ಆಲಿ ರಸ್ತೆಗೆ ಮತೀಯ ತೀವ್ರಗಾಮಿಗಳು ಮ್ಯಾಕ್ರಾನ್ ಅವರ ನೂರಾರು ಪೋಸ್ಟರ್ ಅಂಟಿಸಿ ವಿಕೃತಿ ಮೆರೆದಿದ್ದಾರೆ. ಮಹಾರಾಷ್ಟ್ರ ಸರ್ಕಾರ ಈ ದುಷ್ಕರ್ಮಿಗಳ ಮೇಲೆ ಮೃದು ಮನೋಭಾವನೆ ತೋರಿದ್ದು ಸದ್ಯಕ್ಕೆ ಈ ಪೋಸ್ಟರ್ ಗಳನ್ನು ಪೊಲೀಸರು ತೆರವುಗೊಳಿಸಿದ್ದಾರೆ .
ಭಾರತ ಸರ್ಕಾರ ಫ್ರಾನ್ಸ್ ಪರವಾಗಿ ನಿಂತಿದ್ದು ಭಯೋತ್ಪಾದಕ ಚಟುವಟಿಕೆಯನ್ನು ಹತ್ತಿಕ್ಕಲು ಒಗ್ಗೂಡಿ ಹೋರಾಟ ನಡೆಸುವುದಾಗಿ ಸ್ಪಷ್ಟಪಡಿಸಿದ್ದು ,ಇದು ತೀವ್ರಗಾಮಿಗಳ ಕಣ್ಣನ್ನು ಕೆಂಪಾಗಿಸಿದೆ .ಮತೀಯ ತೀವ್ರಗಾಮಿಗಳ ಅಟ್ಟಹಾಸ ಹೇಗಿದೆ ನೋಡಿ ಈ ವಿಡಿಯೋ

Comments
Post a Comment