ಉತ್ತರಪ್ರದೇಶದಲ್ಲಿ ಲವ್ ಜಿಹಾದ್ ಗೆ ಕಡಿವಾಣ ಹಾಕಲು ಕಠಿಣ ಕಾನೂನು ಜಾರಿಗೆ ನಿರ್ಧರಿಸಿದ ಯೋಗಿ ಆದಿತ್ಯನಾಥ್

 ಉತ್ತರಪ್ರದೇಶದಲ್ಲಿ ಲವ್ ಜಿಹಾದ್ ಷಡ್ಯಂತ್ರವನ್ನು ತಡೆಯಲು ಹೊಸ ಕಾನೂನು ಜಾರಿಗೆ ತರುವುದಾಗಿ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಿಳಿಸಿದ್ದಾರೆ ಜೌನ್ ಪುರದಲ್ಲಿ ಶನಿವಾರ ನಡೆದ ಉಪಚುನಾವಣೆ ಪ್ರಚಾರ  ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಹಿಂದೂ ಸಹೋದರಿಯರ ರಕ್ಷಣೆಗೆ ನಮ್ಮ ಸರ್ಕಾರ ಬದ್ಧವಾಗಿದ್ದು ಹಿಂದೂ ಮಹಿಳೆಯರು ಮತ್ತು ಯುವತಿಯರನ್ನು ಎಲ್ಲರೂ ಗೌರವದಿಂದ ಕಾಣಬೇಕು.

ಅವರ ಬಾಳಿನಲ್ಲಿ ಯಾರೊಬ್ಬರೂ ಚೆಲ್ಲಾಟವಾಡುವುದನ್ನು ನಾವು ಸಹಿಸುವುದಿಲ್ಲ ಎಂಬ ಖಡಕ್ ಸಂದೇಶವನ್ನು ರವಾನಿಸಿದ್ದಾರೆ .ತಮ್ಮ ನೈಜ ಮುಖವಾಡವನ್ನು ಗೌಪ್ಯವಾಗಿರಿಸಿ ಹಿಂದೂ ಸಹೋದರಿಯ ಬಾಳಲ್ಲಿ ಚೆಲ್ಲಾಟ ಆಡುವವರಿಗೆ ಎಚ್ಚರ ನೀಡುತ್ತಿದ್ದೇನೆ. ಇನ್ನಾದರೂ ನಿಮ್ಮ ನಡೆಗಳನ್ನು ತಿದ್ದಿಕೊಳ್ಳಬೇಕು ಇಲ್ಲವಾದರೆ ರಾಮ್ ನಾಮ್ ಸತ್ಯ ಹೈ ಎಂಬ ಅಂತಿಮ ಯಾತ್ರೆಯ ಘೋಷಣೆ ಕೂಗಲಾಗುವುದು ಎಂಬ ಕಠಿಣ ಎಚ್ಚರಿಕೆಯನ್ನು ಯೋಗಿ ಆದಿತ್ಯನಾಥ್ ನೀಡಿದ್ದಾರೆ.

ಇದೇ ವೇಳೆ ಅಲಹಾಬಾದ್ ಹೈಕೋರ್ಟ್ ನೀಡಿರುವ ತೀರ್ಪನ್ನು ಪ್ರಸ್ತಾಪಿಸಿದ ಯೋಗಿ ಆದಿತ್ಯನಾಥ್ ಅವರು ಮದುವೆಯಾಗಲು ಮತಾಂತರದ ಅಗತ್ಯವಿಲ್ಲ ಎಂಬ ನ್ಯಾಯಾಲಯದ ಆದೇಶ ಸ್ಪಷ್ಟವಾಗಿದೆ .ಲವ್ ಜಿಹಾದ್ ಗೆ ಕಡಿವಾಣ ಹಾಕಲು ಸರ್ಕಾರ ಪಣತೊಟ್ಟಿದ್ದು ಈ ಸಂಬಂಧ ಶೀಘ್ರದಲ್ಲಿ ಕಾನೂನು ಜಾರಿಗೆ ತರುವುದಾಗಿ ಯೋಗಿ ಆದಿತ್ಯನಾಥ್ ಘೋಷಿಸಿದರು .



Comments