ದೆಹಲಿಯಲ್ಲಿ ಸಾರ್ವಜನಿಕರೆದುರು ಪಿಸ್ತೂಲ್ ತೆಗೆದು ಅಬ್ಬರಿಸಿದ ಬುರ್ಖಾಧಾರಿ ಮಹಿಳೆ

ದೆಹಲಿಯ ಜಾಫ್ರಾಬಾದ್ ಪ್ರದೇಶದಲ್ಲಿ ಬುರ್ಖಾಧಾರಿ ಮಹಿಳೆ ಯೊಬ್ಬರು ಕ್ಷುಲ್ಲಕ ಕಾರಣಕ್ಕೆ ಪಿಸ್ತೂಲ್ ತೆಗೆದು ಅಟ್ಟಹಾಸ ಮೆರೆದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ . ಈ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಎಚ್ಚೆತ್ತ ಪೊಲೀಸ್ ಇಲಾಖೆ ಕೂಡಲೇ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಮಹಿಳೆಯನ್ನು ಬಂಧಿಸಿದ್ದಾರೆ.ಬಂಧಿತ ಮಹಿಳೆಯನ್ನು ನುಸ್ರತ್ ಎಂದು ಗುರುತಿಸಲಾಗಿದೆ ಈಕೆ ತನ್ನನ್ನು ಸ್ಥಳೀಯವಾದ ಗ್ಯಾಂಗ್ ವೊಂದರಲ್ಲಿ ಗುರುತಿಸಲ್ಪಟ್ಟ ವಳು ಎಂದೂ ದಿನಸಿ ಅಂಗಡಿಗೆ ಆಗಮಿಸಿ ಬೆದರಿಕೆಯೊಡ್ಡಿ ಪಿಸ್ತೂಲ್ ನಲ್ಲಿ ಗುಂಡು ಹಾರಿಸಿ ಅಟ್ಟಹಾಸ ಮೆರೆದಿದ್ದಾಳೆ. ಘಟನೆಯಲ್ಲಿ ಯಾರಿಗೂ ಗಾಯವಾಗಿಲ್ಲ ಎಂದು ವರದಿಯಾಗಿದೆ. ಪೊಲೀಸರು ತನಿಖೆ ಮುಂದುವರೆಸಿದ್ದು ಘಟನೆ ಸಂಬಂಧಿಸಿ ವಿಡಿಯೋ ನೋಡಿ,

Comments