ಮಂಗಳೂರಿನ ಬಿಜೈ ಅಪಾರ್ಟ್‌ಮೆಂಟ್‌ವೊಂದ ಕೌಂಪೌಂಡ್‌ನಲ್ಲಿ ರಾತ್ರಿ ವೇಳೆ ಮತೀಯ ತೀವ್ರಗಾಮಿಗಳು ಉಗ್ರ ಸಂಘಟನೆ ಪರ ಗೋಡೆ ಬರಹ ಬರೆದ ಘಟನೆ ಬೆಳಕಿಗೆ ಬಂದಿದೆ.ಅಪಾರ್ಟ್‌ಮೆಂಟ್ ಕಾಂಪೌಂಡ್‌ನ ಮೇಲೆ ಹ್ಯಾಷ್ ಟ್ಯಾಗ್ ಹಾಕಿ, "ಲಷ್ಕರ್ ಜಿಂದಾಬಾದ್" ಎಂದು ಬರೆದಿದ್ದು, ಸಂಘ ಪರಿವಾರದವರೇ ವಿನಾಕಾರಣ ಲಷ್ಕರ್ ಮತ್ತು ತಾಲಿಬಾನ್ ಗಳನ್ನು ಆಮಂತ್ರಿಸುವಂತೆ ಮಾಡಬೇಡಿ ಎಂದು ಬರೆದಿದ್ದಾರೆ.ಉಗ್ರ ಸಂಘಟನೆಗಳ ಪರ ವಿವಾದಾತ್ಮಕವಾದ ಗೋಡೆ ಬರಹ ವಿಚಾರ ತಿಳಿದು ಸ್ಥಳಕ್ಕೆ ಕದ್ರಿ ಪೊಲೀಸರು ಆಗಮಿಸ ವಿವಾದಿತ ಬರಹದ ಮೇಲೆ ಟರ್ಪಾಲು ಹಾಕಿ, ಪೈಂಟ್ ಬಳಿಯಲು ವ್ಯವಸ್ಥೆ ಮಾಡುತ್ತಿದ್ದಾರೆ.

Comments
Post a Comment